ಬೆಂಗಳೂರು :- ರಾಜ್ಯದಲ್ಲಿ ನಿನ್ನೆ 329 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗದಗ ಜಿಲ್ಲೆಯಲ್ಲಿ 48 ವರ್ಷದ ವ್ಯಕ್ತಿಯೋರ್ವ ಕೊರೊನಾಗೆ ಬಲಿಯಾಗಿದ್ದಾನೆ.
ಇನ್ನು ಬೆಂಗಳೂರಿನಲ್ಲಿಯೇ 177 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯದ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 8.61 ರಷ್ಟಿದೆ. ಈ ಮೂಲಕ 1,181 ಜನರಲ್ಲಿ ಕೊರೊನಾ ಸಕ್ರಿಯ ಕೇಸ್ಗಳಿವೆ. ಇಂದು 283 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಇಂದು 329 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರು 177, ಮೈಸೂರು 27, ಹಾಸನ 17, ತುಮಕೂರು 16, ಬಾಗಲಕೋಟೆ 10, ಮಂಡ್ಯ 10, ಬೆಂಗಳೂರು ಗ್ರಾಮಾಂತರ 8, ಚಿಕ್ಕಮಗಳೂರು 7, ಚಿತ್ರದುರ್ಗ 7, ಧಾರವಾಡ 7, ಉತ್ತರ ಕನ್ನಡ 6, ಚಾಮರಾಜನಗರ 5, ರಾಯಚೂರು 5, ಚಿಕ್ಕಬಳ್ಳಾಪುರ 4, ಕೋಲಾರ 4, ಕೊಪ್ಪಳ 4, ಬಳ್ಳಾರಿ 3, ಶಿವಮೊಗ್ಗ 3, ವಿಜಯನಗರ 3, ದಾವಣಗೆರೆ 2, ದಕ್ಷಿಣ ಕನ್ನಡ 1, ಗದಗ 1, ಕಲಬುರಗಿಯಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.