ಗದಗ : ಬಳಗಾನೂರಿನ ಮೌನಯೋಗಿ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30 ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ದಿನಾಂಕ ನಿಗದಿಯಾಗಿದೆ. ಮುಂಬರುವ ಫೆ.3ರಿಂದ ಫೆ.5ರವರೆಗೆ ಜಾತ್ರ ಮಹೋತ್ಸವ ಜರುಗಲಿದೆ ಎಂದು ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಮಾಹಹಿತಿ ನೀಡಿದರು. ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.3 ರಂದು ಬೆಳಿಗ್ಗೆ 8 ಘಂಟೆಗೆ ಷಠಸ್ಥಲ ಧ್ವಜಾರೋಹಣ ಜರುಗಲಿದ್ದು, ಸಂಜೆ ಮಹಾತ್ಮರ ಜೀವನ ದರ್ಶನ ಪ್ರವಚನ ಮಂಗಲೋತ್ಸವ ಜರುಗುತ್ತದೆ. ನಂತರ 6 ಘಂಟೆಗೆ ಲಘು ರಥೋತ್ಸವ ನಡೆಯಲಿದೆ ಎಂದರು.
ಫೆ. 4 ರಂದು ಬೆಳಿಗ್ಗೆ 5 ಘಂಟೆಗೆ ಶ್ರೀ ಚನ್ನವೀರ ಶರಣರ ಕರ್ತೃ ಗದ್ದುಗೆಗೆ ಮಹಾ ರುಧ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಲಿಂಗದೀಕ್ಷೆ ಅಯ್ಯಾಚಾರ ಜರುಗಲಿದೆ. ಬೆಳಿಗ್ಗೆ 10 ಘಂಟೆಗೆ ಶ್ರೀ ಚನ್ನವೀರ ಶರಣರ 30 ನೇ ಸ್ಮರಣೋತ್ಸವ ಹಾಗೂ ವಿವಾಹ ಕಲ್ಯಾಣ ಮಹೋತ್ಸವ ಜರುಗುವುದು. ಸಂಜೆ ನಡೆಯುವ ಧಾರ್ಮಿಕ ಚಿಂತನ ಗೋಷ್ಠಿಯಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೂಜ್ಯ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ನಂತರ ಕಡುಬಿನ ಕಾಳಗ, ಶ್ರೀ ಶರಣರ ಬೆಳ್ಳಿ ಮೂರ್ತಿಉತ್ಸವ ಜರುಗುವದು ಅಂತಾ ಶ್ರೀಗಳು ತಿಳಿಸಿದ್ರು. ಸುದ್ದಿಗೋಷ್ಠಿಯಲ್ಲಿ ಎ ಎನ್ ನಾಗರಳ್ಳಿ, ವಿ ಬಿ ಪೊಲೀಸ್ ಪಾಟೀಲ್, ಎಂ ಬಿ ಸಿಕ್ಕೇದೇಸಾಯಿ. ವಿ ಎಸ್ ಹಿರೇಮಠ, ಎಸ್ ಬಿ ಪಾಟೀಲ್, ಎಸ್ ಎಸ್ ಪಾಟೀಲ್ ಸೇರಿದಂತೆ ಇತರರು ಇದ್ದರು.