ಹುಬ್ಬಳ್ಳಿ: ನಗರದಾದ್ಯಂತ ಶನಿವಾರ ಸಂಜೆ ಸುಮಾರು 30 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿಯಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಗೆ, ಮಳೆ ತುಸು ತಂಪನೆರೆಯಿತು. ಮಾರುಕಟ್ಟೆಗೆ ಬಂದವರು ಏಕಾಏಕಿ ಸುರಿದ ಮಳೆಯಿಂದ ಪರದಾಡಿದರು.
ಬೈಕ್ ಸವಾರರು ನೆನೆಯುತ್ತಲೇ ಸಂಚರಿಸಿದ ದೃಶ್ಯ ಕಂಡು ಬಂದಿತು.
ರಸ್ತೆ ಕಾಮಗಾರಿ ನಡೆಯುತ್ತಿರುವ ಅಶೋಕನಗರ, ದೇಶಪಾಂಡೆನಗರ, ದೇವಾಂಗಪೇಟೆ, ಚನ್ನಪೇಟೆ, ಆನಂದನಗರ ರಸ್ತೆಯ ಅಲ್ಲಲ್ಲಿ ನೀರು ನಿಂತಿತ್ತು.
ಕಾಮಗಾರಿಯಿಂದಾಗಿ ನಿಂತ ಕೊಳಚೆ ನೀರಿನಿಂದ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.