ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಮದುವೆಯಾದ ಬಳಿಕ ಪತಿ ಹಾಗೂ ಮಗಳೊಂದಿಗೆ ಲಾಸ್ ಏಂಜಲೀಸ್ ನಲ್ಲಿರುವ ನಟಿ ಇದೀಗ ಮತ್ತೆ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ.
‘ಆರ್ಆರ್ಆರ್’ ಸಿನಿಮಾದ ಮೂಲಕ ಜಾಗತೀಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ರಾಜಮೌಳಿ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಪ್ರಿಯಾಂಕಗೆ ಜೋಡಿಯಾಗಿ ಮಹೇಶ್ ಬಾಬು ಕಾಣಿಸಿಕೊಳ್ತಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರಕ್ಕೆ ‘ಎಸ್ಎಸ್ಎಂಬಿ 29’ ಎಂದು ಶೀರ್ಷಿಕೆ ಇಡಲಾಗಿದ್ದು ಈ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆಯುತ್ತಿರುವ ಸಂಭಾವನೆ ಮೊತ್ತ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರು ‘ಎಸ್ಎಸ್ಎಂಬಿ 29’ ಸಿನಿಮಾಗೆ ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಸಿನಿಮಾ ಅದ್ದೂರಿ ಬಜೆಟ್ನಲ್ಲಿ ತಯಾರಾಗುತ್ತಿದೆ. ಹಾಗಾಗಿ ನಿರ್ಮಾಪಕರು ಪ್ರಿಯಾಂಕಾ ಚೋಪ್ರಾಗೆ ಇಷ್ಟು ಸಂಭಾವನೆ ನೀಡಲು ಸಿದ್ಧರಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಸಿನಿಮಾದ ಕಾರಣದಿಂದ ಪ್ರಿಯಾಂಕಾ ಚೋಪ್ರಾ ಅಮೆರಿಕದಿಂದ ಹೈದರಾಬಾದ್ಗೆ ಬಂದಿದ್ದಾರೆ ಎನ್ನುವ ಮಾಹಿತಿ ಇದೆ.
ಮಹೇಶ್ ಬಾಬು ಅವರು ‘ಎಸ್ಎಸ್ಎಂಬಿ 29’ ಸಿನಿಮಾಗಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಗೆಟಪ್ ಕೂಡ ಬದಲಾಗಲಿದೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದ್ದು, ಆ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ ಎನ್ನಲಾಗುತ್ತಿದೆ. ಚಿತ್ರ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದು ಎಂಎಂ ಕೀರವಾಣಿ ಅವರು ಸಂಗೀತ ನೀಡುತ್ತಿದ್ದಾರೆ.