ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ನೀವು ನೋಡಿಯೇ ಇರ್ತಿರಾ. ಯಾರನ್ನೊ ಮೆಚ್ಚಿಸಲೋ ಅಥವಾ ಮಾತಿನ ಭರದಲ್ಲೋ ದ್ವೇಷ ಹಚ್ಚಿಸುವ ಭಾಷಣ ನೀವು ಕೇಳೇ ಇದ್ದೀರಾ. ಹೀಗಾಗಿ ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಇದೀಗ ಹೊಸ ಬಿಲ್ ತರಲು ಮುಂದಾಗಿದೆ.
ಬಿಟ್ ಕಾಯಿನ್ ಕೇಸ್ ನಲ್ಲಿ ಕಾಂಗ್ರೆಸ್ ಮುಖಂಡನಿಗೆ ನೋಟಿಸ್: ಅದಕ್ಕೆ ನಾನೇನು ಮಾಡಲಿ ಎಂದ ಗೃಹ ಸಚಿವ!?
ದ್ವೇಷ ಭಾಷಣ ಮಾಡಿ ಸಾಬೀತಾದ್ರೆ ಕರ್ನಾಟಕದಲ್ಲಿ ಇನ್ಮೇಲೆ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.
ರಾಜ್ಯ ಸರ್ಕಾರದಿಂದ ಮಹತ್ವದ ಮಸೂದೆಯೊಂದನ್ನ ತರಲು ಸಿದ್ಧತೆ ನಡೆಸಿದ್ದು, ಬಜೆಟ್ ಅಧಿವೇಶನದಲ್ಲಿ ಬಿಲ್ ಮಂಡಿಸುವ ಸಾಧ್ಯತೆ ಇದೆ. ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣ (ಹೋರಾಟ, ತಡೆಗಟ್ಟುವಿಕೆ ಮತ್ತು ಶಿಕ್ಷೆ) ವಿಧೇಯಕ 2025 ಕರಡನ್ನ ಕಾನೂನು ಇಲಾಖೆ ಸಿದ್ಧಪಡಿಸಿದೆ. ಜಾತಿ, ಧರ್ಮ ಆಧರಿಸಿ ದ್ವೇಷ ಭಾಷಣ ಮಾಡಿದ್ರೆ ಜೈಲು ಗ್ಯಾರಂಟಿ. ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ಅಂಗವೈಕಲ್ಯ ಬುಡಕಟ್ಟುವಿನ ಕುರಿತು ದ್ವೇಷ ಭಾಷಣ ಮಾಡುವಂತಿಲ್ಲ ಎಂಬುದನ್ನ ಬಿಲ್ ಕರಡಿನಲ್ಲಿದ್ದು, ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರ ಆಗುತ್ತಾ..? ಕಾದುನೋಡಬೇಕಿದೆ.