ಬೆಂಗಳೂರು:- ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ ಗೃಹ ಜ್ಯೋತಿ ಯೋಜನೆಯಿಂದ ಎಸ್ಕಾಂಗಳು ನಷ್ಟಕ್ಕೆ ಒಳಗಾಗುತ್ತವೆ ಎಂಬ ಮಾತುಗಳ ಮಧ್ಯೆಯೇ, ಬೆಸ್ಕಾಂ 2023-24 ರ ಹಣಕಾಸು ವರ್ಷದಲ್ಲಿ 7 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಲಾಭ ಕಂಡಿರುವುದು ಗೊತ್ತಾಗಿದೆ.
2013-14 ಹಣಕಾಸು ವರ್ಷದಲ್ಲಿ 11 ಸಾವಿರ ಕೋಟಿ ರೂಪಾಯಿಗಳ ಆದಾಯ ಸಂಗ್ರಹ ಮಾಡಿದ್ದ ಬೆಸ್ಕಾಂ ಬಳಿಕ ಪ್ರತಿವರ್ಷ ಲಾಭದ ಹಳಿಯಲ್ಲಿಯೇ ಇದೆ. ತದನಂತರ ಪ್ರಮುಖವಾಗಿ ಕಳೆದ 5 ವರ್ಷಗಳನ್ನು ಗಮನಿಸಿದಾಗ 2020-21ರಲ್ಲಿ 19, 233 ಕೋಟಿ, 2021-22ರಲ್ಲಿ 20,712 ಕೋಟಿ ಹಾಗೂ 2022-23ರಲ್ಲಿ 24,700 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಬಳಿಕ ಕಳೆದ ಹಣಕಾಸು ವರ್ಷ ಅಂದರೆ 2023-24ರಲ್ಲಿ ಬರೋಬ್ಬರಿ 31,378 ಕೋಟಿ ರೂಪಾಯಿಗಳ ಭರ್ಜರಿ ಆದಾಯ ಕಂಡಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಬೆಸ್ಕಾಂ, ಬೇರೆ ಎಲ್ಲಾ ಸರ್ಕಾರದ ಸಂಸ್ಥೆಗಳು ನಷ್ಟ ಸುಳಿಯಲ್ಲಿ ಇರುವಾಗ ಬೆಸ್ಕಾಂ ಮಾತ್ರ ಆದಾಯದಲ್ಲಿರುವುದು ಸಂತೋಷ ಮತ್ತು ಬೆಸ್ಕಾಂ ಪ್ರತಿವರ್ಷವೂ ದರ ಹೆಚ್ಚಳ ಮಾಡುತ್ತದೆ. ಆದರೆ ಗ್ರಾಹಕರಿಗೆ ಹೊರೆ ಆಗದ ರೀತಿಯ 20 ರಿಂದ 30 ಪೈಸೆಯಷ್ಟು ಹೆಚ್ಚಳ ಮಾಡುತ್ತದೆ ಎಂದಿದೆ