ದೇಶದ ಬೆನ್ನೆಲುಭಾಗಿರುವ ರೈತರಿಗೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ನೀಡಿದೆ. ಹಲವ ಯೋಜನೆಗಳು ಜನರಿಗೆ ತಲುಪುವಲ್ಲಿ ವಿಫಲವಾಗಿದೆ.
ರೈತರು ವೃದ್ಧಾಪ್ಯದಲ್ಲಿ ತೊಂದರೆ ಅನುಭವಿಸಬಾರದೆಂದು ಪ್ರಧಾನ ಮಂತ್ರಿ ಕಿಶನ್ ಮನ್ ಧನ್ ಎಂಬ ಹೊಸ ಯೋಜನೆಯನ್ನು ರಚಿಸಿದೆ. ಈ ಯೋಜನೆಯಿಂದ ಆರ್ಥಿಕ ಭದ್ರತೆ ದೊರೆಯಲಿದೆ ಎನ್ನಲಾಗಿದೆ. ಈ ಯೋಜನೆಯಡಿ ತಿಂಗಳಿಗೆ 55 ರೂ. ಪಾವತಿಸಿದರೆ, 60 ವರ್ಷ ಹೂಡಿಕೆಯ ನಂತರ ಪ್ರತಿ ತಿಂಗಳು 3 ಸಾವಿರ ರೂ.ಸಿಗಲಿದೆ.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಸರ್ಕಾರವು ಸಂಪೂರ್ಣವಾಗಿ ಬಡ ರೈತರಿಗಾಗಿ ಪ್ರಾರಂಭಿಸಿದೆ. 18 ರಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ಸೇರಲು ಅರ್ಹರು. ಈ ಯೋಜನೆಯಡಿ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು. ಈ ಯೋಜನೆ ತಕ್ಷಣಕ್ಕೆ ಲಾಭ ನೀಡದಿದ್ದರೂ ರೈತರು ವೃದ್ಧಾಪ್ಯದಲ್ಲಿ ನೆಮ್ಮದಿಯಿಂದ ಇರಲು ಸಹಕಾರಿಯಾಗುತ್ತದೆ.
ಈ ಪಿಎಂ ಕಿಸಾನ್ ಮನ್ ಧನ್ ಯೋಜನೆಯು ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕೊನೆಗಾಲದಲ್ಲಿ ಮಕ್ಕಳು ಕೈಬಿಟ್ಟಾಗ ಕಣ್ಣೀರು ಹಾಕುವ ಬದಲು ಈ ಯೋಜನೆಯಲ್ಲಿ ಹೂಡಿಕೆ ರೂಪದಲ್ಲಿ ಹಣ ಹಾಕಿದರೆ ವೃದ್ಧಾಪ್ಯದಲ್ಲಿ ಪಿಂಚಣಿ ರೂಪದಲ್ಲಿ ಹಣ ಪಡೆದು ನೆಮ್ಮದಿಯ ಜೀವನ ನಡೆಸಬಹುದಾಗಿದೆ.
ಇನ್ನು ವಯಸ್ಸಿಗೆ ಅನುಗುಣವಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ರೈತರ ಮಕ್ಕಳು 18 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ಅದು ತಿಂಗಳಿಗೆ 55 ರೂ. ಆಗಿರುತ್ತದೆ. ಅದೇ 30 ವರ್ಷದ ನಂತರ ಅವರು 110 ರೂ. ಪಾವತಿಸಬೇಕಾಗುತ್ತದೆ. ಅದೇ ರೀತಿ 40 ವರ್ಷದಿಂದ ಆರಂಭಿಸಿದರೆ 220 ರೂ. ತುಂಬಬೇಕಾಗುತ್ತದೆ. ಈ ಅವಧಿಯಲ್ಲಿ 60 ವರ್ಷಕ್ಕೆ ತಲುಪಿದಾಗ ತಿಂಗಳಿಗೆ 3 ಸಾವಿರ ರೂ. ಫಲಾನುಭವಿಗಳು ಜೀವಂತವಾಗಿರುವವರೆಗೆ ಇದು ಸಿಗುತ್ತದೆ.
ಪ್ರತಿ ತಿಂಗಳು 3 ಸಾವಿರ ರೂ. ನಂತೆ ಒಂದು ವರ್ಷದಲ್ಲಿ 36 ಸಾವಿರ ರೂ.ಹಣ ಖಾತೆಗೆ ಬರಲಿದೆ. ರೈತರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯನ್ನು ಪಡೆದುಕೊಳ್ಳಬಹುದು.