ಬೆಂಗಳೂರು : ಪ್ರಜ್ವಲ್ ರೇವಣ್ಣರನ್ನ ಅರೆಸ್ಟ್ ಏನೋ ಮಾಡಿದ್ರು.. ಆದ್ರೆ ಆವ್ರ ಬಾಯಿ ಬಿಡಿಸೋದೇ ಎಸ್ಐಟಿ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.. ಎಸ್ಐಟಿ ಮುಂದೆ ಪ್ರಜ್ವಲ್ ರೇವಣ್ಣ ಮಾತ್ರ ಮೌನವೇ ಉತ್ತರ ಅಂತಿದ್ದಾರೆ.. ಪದೇ ಪದೇ ಅದೇ ಹೇಳ್ತಿದ್ದಾರೆ..ಇಂದಿಗೆ ಮೂರನೇ ದಿನ.. ಇವೆತ್ತೆಲ್ಲಾ ಏನಾಯಿತು ಅಂತೀರಾ ಹೇಳ್ತೀವಿ ನೋಡಿ…
Bengaluru: ಭಾರೀ ಮಳೆಗೆ ಕರ್ನಾಟಕ ತತ್ತರ..ಹಲವು ವಾಹನ ಜಖಂ.. ಬರೋಬ್ಬರಿ 206 ಮರಗಳು ಧರಾಶಾಹಿ!
ಯೆಸ್… ಅತ್ಯಾಚಾರ ಆರೋಪದ ಕೇಸ್ ನಲ್ಲಿ ಅರೆಸ್ಟ್ ಆಗಿರೋ ಪ್ರಜ್ವಲ್ ರೇವಣ್ಣರನ್ನ ಎಸ್ಐಟಿ ಕಷ್ಟಡಿಗೆ ಪಡೆದು ಮೂರು ದಿನ ಆಯ್ತು.. ವಿಚಾರಣೆ ನಡೆಸ್ತಿರೋ ಎಸ್ಐಟಿ ಟೀಂಗೆ ಪ್ರಜ್ವಲ್ ರೇವಣ್ಣ ಮಾತ್ರ ಏನೂ ಉತ್ರ ಕೊಡ್ತಿಲ್ಲ.. ವಿಚಾರಣೆ ಮಾಡ್ತಿರೋ ಎಸ್ಐಟಿ ಮುಂದೆ ಮೊಂಡಾಟ ತೋರ್ತಿದ್ದಾರೆ ಎನ್ನಲಾಗ್ತಿದೆ.. ಮೂರು ದಿನದಿಂದ್ಲೂ ಕೂಡ ಪ್ರಜ್ವಲ್ ರೇವಣ್ಣ ತನಿಖೆಗೆ ಅಸಹಕಾರ ತೋರ್ತಿದ್ದು ಎಸ್ಐಟಿ ಪ್ರಜ್ವಲ್ ರೇವಣ್ಣರ ಬಾಯಿ ಬಿಡಿಸೋದು ಎಸ್ಐಟಿಗೆ ದೊಡ್ಡ ತಲೆನೋವಾಗಿದೆ..
ಹೌದು.. ಎಸ್ಐಟಿ ತನಿಖಾಧಿಕಾರಿ ಎಷ್ಟು ಕೇಳಿದ್ರೂ ನಾನೇನು ಮಾಡಿಲ್ಲ.. ತಪ್ಪೇ ಮಾಡಿಲ್ಲ ಅಂತಿರೋ ಪ್ರಜ್ವಲ್ ರೇವಣ್ಣ ಇದೆಲ್ಲವೂ ರಾಜಕೀಯ ಷಡ್ಯಂತರ.. ನನ್ನ ರಾಜಕೀಯವಾಗಿ ತುಳಿಯೋಕೆ ಈ ರೀತಿ ಮಾಡಿದ್ದಾರೆ.. ನಾನು ಅತ್ಯಾಚಾರ ಮಾಡಿಲ್ಲ.. ಅಂತಾ ಉತ್ತರ ನೀಡ್ತಿದ್ದಾರೆ.. ಅಲ್ದೆ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎನ್ನಲಾದ ಮೊಬೈಲ್ ಬಗ್ಗೆಯೂ ಕೇಳಿದ್ರೆ ಯಾವ ಮೊಬೈಲ್.. ಒಂದು ವರ್ಷದ ಹಿಂದೆ ತನ್ನ ಮೊಬೈಲ್ ಕಳೆದೋಗಿದೆ.. ಇರೋ ಮೊಬೈಲ್ ನಿಮ್ಮ ಹತ್ರ ಕೊಟ್ಟಿದ್ದೀನಿ ನನ್ನತ್ರ ಯಾವ ಮೊಬೈಲ್ ಕೂಡ ಇಲ್ಲ ಅಂತಾ ಹೇಳಿಕೆ ನೀಡ್ತಿದ್ದಾರೆ.. ಈಗಿನ ಮೊಬೈಲ್ ಪರಿಶೀಲನೆ ಮಾಡಿದ್ರೆ ಅದ್ರಲ್ಲಿ ಎಸ್ಐಟಿಗೆ ಬೇಕಾದ ಎವಿಡೆನ್ಸ್ ಗಳು ಸಿಗ್ತಿಲ್ಲ ಎನ್ನಲಾಗ್ತಿದೆ.. ಈ ನಡುವೆ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಕಚೇರಿಯಲ್ಲೂ ಹಿರಿಯ ಅಧಿಕಾರಿಗಳು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.. ಕೇಸ್ ನ ತನಿಖಾಧಿಕಾರಿಗಳು ಮತ್ತು ಸಿಬ್ಬಂದಿ ಬಿಟ್ರೆ ಬೇರೆ ಯಾರೂ ಕೂಡ ಆಕಡೆ ತಲೆ ಹಾಕೋಹಾಗಿಲ್ಲ ಅಂತಾ ಸೂಚನೆ ನೀಡಿದ್ದಾರಂತೆ…
ಇನ್ನು ಪ್ರಜ್ವಲ್ ರೇವಣ್ಣ ಕಷ್ಟಡಿ ಇನ್ನೂ ಮೂರು ದಿನ ಮಾತ್ರ ಬಾಕಿ ಇದೆ.. ಅಷ್ಟರಲ್ಲೇ ಎಸ್ಐಟಿ ಪ್ರಜ್ವಲ್ ಬಾಯಿ ಬಿಡಿಸ್ಬೇಕು.. ಸದ್ಯಕ್ಕಂತೂ ಪ್ರಜ್ವಲ್ ರೇವಣ್ಣ ಬಾಯ್ಬಿಡ್ತಿಲ್ಲ.. ಹೀಗಾಗಿ ಮುಂದಿನ ಹಂತದ ತನಿಖೆಗೆ ಎಸ್ಐಟಿ ಮುಂದಾಗಿದ್ದು ಸ್ಥಳ ಮಹಜರು ಮಾಡೋಕೆ ಪ್ರಜ್ವಲ್ ರನ್ನ ಹೊಳೆನರಸೀಪುರಕ್ಕೆ ಕರೆದೊಯ್ಯಲು ಚಿಂತನೆ ನಡೆಸಿದೆ.. ಇಂದು ರಾತ್ರಿ ಅಥವಾ ನಾಳೆ ಪ್ರಜ್ವಲ್ ರನ್ನ ಸ್ಥಳ ಮಹಜರಿಗೆ ಕರೆದೊಯ್ಯಲಿದ್ದು ರಿಸಲ್ಟ್ ದಿನ ಆದ್ರೆ ಅಲ್ಲಿ ಅಭಿಮಾನಿಗಳು, ಬೆಂಬಲಿಗರು ಸೇರೋ ಸಾಧ್ಯತೆ ಇದೆ.. ಈ ಕೇಸ್ ನಲ್ಲಿ ಇನ್ನೂ ಏನಾಗುತ್ತೆ ಕಾದು ಅನ್ನೋದನ್ನ ನೋಡಬೇಕಿದೆ..