ಬೆಂಗಳೂರು: ರಾತ್ರಿ ವೇಳೆ ವಾಹನ ಸವಾರನನ್ನು ಅಡ್ಡಗಟ್ಟಿ ಮೊಬೈಲ್ ಹಾಗು ಹಣ ದೋಚುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.ಚಿಕ್ಕಜಾಲ ನಿವಾಸಿ ಆಕಾಶ್, (19) , ಟೆಲಿಕಾಂ ಲೇಔಟ್ ನ ಪ್ರವೀಣ್ (18)), ಮಾರನಾಯಕನಹಳ್ಳಿ ನಿವಾಸಿಯಾದ ಹನುಮಂತ (22) ಬಂಧಿತ ಆರೋಪಿಗಳು.ಬಂಧಿತರಿಂದ 4 ಲಕ್ಷ 20 ಸಾವಿರ ಬೆಲೆ ಬಾಳುವ 20 ವಿವಿಧ ಕಂಪನಿಯ ಮೊಬೈಲ್ ಗಳು ಹಾಗು ಕೃತ್ಯಕ್ಕೆ ಬಳಸಿದ್ದ,
ಒಂದು ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಏಪ್ರಿಲ್ 14 ರಂದು ದೊಡ್ಡಬಳ್ಳಾಪುರದ ಸೊಣ್ಣಪ್ಪನಹಳ್ಳಿ ಮಾರ್ಗದಲ್ಲಿ ಹೋಗುತ್ತಿದ್ದ ಬೈಕ್ ಸವಾರರನ್ನು ಮೂವರು ಆರೋಪಿಗಳು ಮಾರಕಸ್ತ್ರಗಳಿಂದ ಬೆದರಿಸುವಾಗ ಸುತ್ತ ಮುತ್ತಲಿನ ಗ್ರಾಮಸ್ಥರು ಇಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ..