ಹುಬ್ಬಳ್ಳಿ: ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ 3.26 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ರೋಹಿತ್ ಎಂಬಾತ ಮೊಬೈಲ್ ಫೋನ್ ಬೇಕೆಂದು ಸಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಿದ್ದ. ಇದಕ್ಕೆ ಆರ್ಡರ್ ಒಕೆ ಆಗಿದೆ ಎಂದು ನಂಬಿಸಿದ ವಂಚಕರು, ಹಂತ ಹಂತವಾಗಿ 3.26 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.