ಬಾಗಲಕೋಟೆ:- ಬಾಗಲಕೋಟೆ ಲೋಕಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಎರಡನೆಯ ಹಂತದ ಮತದಾನಕ್ಕೆ ಒಂದೆ ದಿನಾ ಬಾಕಿ ಇರುವ ಹಿನ್ನಲೆ, ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಎಸ್ ಆರ್ ಎ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚುನಾವಣಾ ಸಿಬ್ಬಂದಿಯಿಂದ ಮತಪೆಟ್ಟಿಗೆ ಪಡೆಯಲು ಆಗಮಿಸಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣ: ಎಲೆಕ್ಷನ್ ಮುಗಿಯೋವರೆಗೂ ಭಾರತಕ್ಕೆ ಪ್ರಜ್ವಲ್ ಮರಳೋದು ಡೌಟು..!
ಬಾಗಲಕೋಟೆ ಲೋಕಸಭಾ ಕ್ಷೆತ್ರದಲ್ಲಿ ತೇರದಾಳ. ಜಮಖಂಡಿ. ಮುಧೋಳ. ಬಾಗಲಕೋಟೆ. ಬೀಳಗಿ. ಹುನಗುಂದ. ನರಗುಂದ. ಬದಾಮಿ. ವಿಧಾನಸಭಾ ಕ್ಷೆತ್ರಗಳು ಇದ್ದು, ನಾಳೆ ಮತದಾನ ನಡೆಯಲಿದೆ
ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು 221233
ಪುರುಷ ಮತದಾರರು 110616
ಮಹಿಳಾ ಮತದಾರರು 110616
ತೇರದಾಳದಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 236 ಮತಗಟ್ಟೆಗಳನ್ನ ಆಯ್ಕೆ ಮಾಡಲಾಗಿದೆ. ವಿಧಾನಸಭಾ ಕ್ಷೆತ್ರದಲ್ಲಿ 5 ಪಿಂಕ್ ಮತದಾನ ಕೇಂದ್ರ ಗಳನ್ನ ಸ್ಥಾಪನೆ ಮಾಡಲಾಗಿದೆ. ಒಟ್ಟು ಮತಗಟ್ಟೆಗಳಿಗಾಗಿ ಕಾರ್ಯನಿರ್ವಹಿಸಲು 1128 ಸಿಬ್ಬಂದಿಗಳ ನೇಮಕ ಮಾಡಲಾಗಿದೆ. ಚುಣಾವಣೆಗೆ ಒಟ್ಟು ಎಸ್ ಪಿ ವ್ಯಾಪ್ತಿಯಲ್ಲಿ 354 ಪೋಲಿಸ್ ಸಿಬ್ಬಂದಿಗಳ ನೇಮಕ ಮಾಡಲಾಗಿದೆ. 5 ಅತೀ ಸೂಕ್ಮ, ಮತ ಕೇಂದ್ರ ಗಳ ಸ್ಥಾಪನೆ ಮಾಡಲಾಗಿದ್ದು, ಒಟ್ಟು ಬಸ್ ಗಳ ಸಂಖ್ಯೆ 43 ಕೆಎಸ್ ಆರ್ ಟಿ ಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಮೇ 5 ಸಂಜೆ 7 ರಿಂದ ಮೇ 7 ರಾತ್ರಿ 12 ಘಂಟೆಯವರೆಗೆ ಮದ್ಯ ಮಾರಾಟ, ಸಂಗ್ರಹಣೆ ನಿಷೇಧ ಮಾಡಲಾಗಿದೆ. ನಾಳೆ ಬೆಳಿಗ್ಗೆ 7 ಘಂಟೆಯಿಂದ ಸಾಯಂಕಾಲ 6 ಘಂಟೆವರೆಗೆ ಮತದಾನಕ್ಕೆ ಅವಕಾಶ ಇದೆ. ಮತದಾರರು ಕಡ್ಡಾಯವಾಗಿ ತಮ್ಮ ಅಮೂಲ್ಯವಾದ ಮತ ಹಾಕಿ ಎಂದು ರಬಕವಿ ಬನಹಟ್ಟಿ ತಹಶೀಲ್ದಾರ ಗೀರಿಶ ಬಿ ಸ್ವಾದಿ ಹೇಳಿದರು.
ಪ್ರಕಾಶ ಕುಂಬಾರ
ಬಾಗಲಕೋಟೆ