ಬೆಂಗಳೂರು: ಮಾಜಿ ಕಾರ್ಪೋರೇಟರ್ ಗೆ ಜಾತಿ ನಿಂದನೆ ಕೇಸ್ ನಲ್ಲಿ ಸಿಲುಕಿರೋ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಸದ್ಯ ಪೊಲೀಸರ ಕಸ್ಟಡಿಯಲ್ಲಿದಾರೆ.. ನಿನ್ನೆಯಿಂದ್ಲೂ ತೀವ್ರ ವಿಚಾರಣೆ ನಡೀತಿದೆ.. ಆದ್ರೆ ಪೊಲೀಸ್ರು ಎಷ್ಟೇ ಕೇಳಿದ್ರೂ ಶಾಸಕರು ನಂಗೇನು ಗೊತ್ತಿಲ್ಲ ಅಂತಿದಾರೆ ಇದು ರಾಜಕೀಯ ಕೈವಾಡ ಈ ನಡುವೆ ಇವತ್ತು ACP ಪ್ರಕಾಶ್ ಇನ್ವೆಸ್ಟಿಗೇಷನ್ ಮಾಡಿದರೆ ಇದರ ಕಂಪ್ಲೀಟ್ ಡಿಟೇಲ್ಸ್..
ಜಾತಿ ನಿಂದನೆ ಹಾಗೂ ಬೆದರಿಕೆ ಕೇಸ್ ಆರೋಪದ ಮೇಲೆ ಶಾಸಕ ಮುನಿರತ್ನ ಸದ್ಯ ಕಾನೂನು ಸುಳಿಗೆ ಸಿಲುಕಿದ್ದಾರೆ.. ನಿನ್ನೆಯಿಂದ್ಲೂ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸ್ತಿದ್ದಾರೆ.. ಇವತ್ತು ಎರಡನೇ ದಿನದ ಕಸ್ಟಡಿ.. ಮೊನ್ನೆ ರಾತ್ರಿ ಅರೆಸ್ಟ್ ಮಾಡಿದಾಗಿಂದ್ಲೂ ಎಸಿಪಿ ಪ್ರಕಾಶ್ ರೆಡ್ಡಿ ನೇತೃತ್ವದಲ್ಲಿ ತೀವ್ರ ತನಿಖೆ ನಡೆಸಲಾಗ್ತಿದ್ದು ಎಷ್ಟು ವಿಚಾರಣೆ ಮಾಡಿದ್ರೂ ಶಾಸಕ ಮುನಿರತ್ನ ಹೇಳಿದ್ದೇ ಹೇಳ್ತಿದ್ದಾರಂತೆ..
ಇನ್ನು ಚೆಲುವರಾಜು ಹಾಗೂ ವೇಲು ನಾಯ್ಕ್ ದೂರು ನೀಡಿರೋ ಆಧಾರದ ಮೇಲೆ ಒಂದಷ್ಡು ಪ್ರಶ್ನೆಗಳನ್ನ ಕೇಳಿರೋ ತನಿಖಾಧಿಕಾರಿಗೆ ಶಾಸಕ ಮುನಿರತ್ನ ಹೇಳಿದ್ದೇ ಹೇಳ್ತಿದ್ದಾರಂತೆ.. ಚೆಲುವರಾಜು, ವೇಲು ನಾಯ್ಕ್ ನನ್ನ ಜೊತೆಯಲ್ಲೇ ಇದ್ರು.. ಅವ್ರು ಉಂಡ ಮನೆಗೆ ದ್ರೋಹ ಬಗೆದಿದ್ದಾರೆ.. ಇದು ರಾಜಕೀಯ ಪ್ರೇರಿತ ಆರೋಪ.. ಇದ್ರಲ್ಲಿ ನಂದೇನೂ ತಪ್ಪಿಲ್ಲ.. ಎಮ್ ಪಿ ಎಲೆಕ್ಷನ್ ಆದ್ಮೇಲೆ ನನ್ನ ವಿರುದ್ಧ ಸಾಕಷ್ಟು ಷಡ್ಯಂತರ ನಡೆದಿದೆ.. ಇದೂ ಕೂಡ ನನ್ನ ವಿರುದ್ಧ ನಡೆದಿರೋ ರಾಜಕೀಯ ಷಡ್ಯಂತರ ಅಂತಾ ತನಿಖಾಧಿಕಾರಿ ಮುಂದೆ ಶಾಸಕ ಮುನಿರತ್ನ ಹೇಳ್ತಿದ್ದಾರಂತೆ..
ಫ್ಲೋ
ಇನ್ನು ಇವತ್ತೂ ಕೂಡ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸಿಪಿ ಪ್ರಕಾಶ್ ರೆಡ್ಡಿ ಮುನಿರತ್ನ ಹೇಳಿಕೆ ದಾಖಲಿಸಿಕೊಂಡ್ರು.. ಶಾಸಕರ ಹೇಳಿಕೆಯನ್ನ ವಿಡಿಯೋ ರೆಕಾರ್ಡ್ ಮಾಡಿದ್ದು, ಎಫ್ ಎಸ್ ಎಲ್ ಸಿಬ್ಬಂದಿ ಕೂಡ ಬಂದು ವಾಯ್ಸ್ ಸ್ಯಾಂಪಲ್ ಪಡೆದಿದ್ದಾರೆ.. ಈಗಾಗಲೇ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನ ಎಫ್ ಎಸ್ ಎಲ್ ಸಿಬ್ಬಂದಿ ಪಡೆದದ್ದು ದೂರುದಾರರು ನೀಡಿರೋ ಆಡಿಯೋ ಹಾಗೂ ಮುನಿರತ್ನ ವಾಯ್ಸ್ ಸ್ಯಾಂಪಲ್ ಅನ್ನ ಪರಿಶೀಲನೆ ಮಾಡಲಿದ್ದಾರೆ..
ಇಂದು ಕಸ್ಟಡಿ ಕೊನೆ ದಿನ ಹಿನ್ನೆಲೆ ತನಿಖೆ ಪ್ರೊಸಿಜರ್ ಮುಗಿಸಿರೋ ಪೊಲೀಸರು ಕಸ್ಟಡಿ ಅಂತ್ಯ ಹಿನ್ನೆಲೆ ನಾಳೆ ನ್ಯಾಯಾಧೀಶರ ಮುಂದೆ ಮುನಿರತ್ನರನ್ನ ಹಾಜರುಪಡಿಸಲಿದ್ದಾರೆ.. ಸದ್ಯ ತನಿಖೆ ನಡಿತಿದ್ದು ಎಫ್ ಎಸ್ ಎಲ್ ರಿಪೋರ್ಟ್ ನಲ್ಲಿ ಮುನಿರತ್ನ ವಾಯ್ಸ್ ಮತ್ತು ಆಡಿಯೋದಲ್ಲಿರೋ ವಾಯ್ಸ್ ಮ್ಯಾಚ್ ಆದ್ರೆ ಮುನಿರತ್ನಗೆ ಮತ್ತಷ್ಟು ಕಾನೂನು ಕಂಟಕ ಹೆಚ್ಚಾಗಲಿದೆ..