ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಜಮಖಂಡಿ ಮಿರಜ್ ಹೆದ್ದಾರಿ ರಸ್ತೆ ತಡೆದು ಪ್ರತಿಭಟಿಸಿ ಮತ್ತು ಇಷ್ಟಲಿಂಗ ಪೂಜೆ ಮಾಡುವುದರ ಮುಖಾಂತರ ಟು ಎ ಮೀಸಲಾತಿ ನೀಡಲು ವಿನೂತನವಾಗಿ ಪ್ರತಿಭಟಿಸಿದರು.
ಕರ್ನಾಟಕದಲ್ಲಿ ಸುಮಾರು ಮೂರು ವರ್ಷಗಳಿಂದ ಲಿಂಗಾಯತ ಪಂಚಮಸಾಲಿ ಸಮುದಾಯವು ನಿರಂತರ ಹೋರಾಟ ಮಾಡ್ತಾ ಬಂದಿದೆ.
ಸರ್ಕಾರ ಕಣ್ಣು ತೆರೆದು ನೋಡ್ತಾ ಇಲ್ಲ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಟು ಎ ಮೀಸಲಾತಿ ನೀಡದಿದ್ದರೆ ರಾಜ್ಯದ ಪ್ರತಿ ಹೆದ್ದಾರಿ ರಸ್ತೆಯನ್ನು ತಡೆದು ಇಷ್ಟಲಿಂಗ ಪೂಜೆ ಮಾಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಮತ್ತು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮುಂಭಾಗದ ಹೆದ್ದಾರಿ ರಸ್ತೆಯ ಮೇಲೆ ಇಷ್ಟಲಿಂಗ ಪೂಜೆ ಮಾಡಿ ಪ್ರತಿಭಟಿಸಲಿದ್ದೇವೆ ಸರ್ಕಾರ ಇದನ್ನು ಗಮನದಲ್ಲಿ ಇಟ್ಟುಕೊಂಡು ನಮಗೆ ನ್ಯಾಯ ಕೊಡಿ ಎಂದು ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳು ಕೂಡಲಸಂಗಮ ಹೇಳಿದರು.
ಭಾರತ ದೇಶದಲ್ಲಿ ನಿರಂತರವಾಗಿ ಮೂರು ವರ್ಷಗಳ ಕಾಲ ರಸ್ತೆ ಇಳಿದು ಪ್ರತಿಭಟಿಸಿದ ಯಾವುದಾದರೂ ಸಮಾಜ ಇದ್ದರೆ ಅದು ಲಿಂಗಾಯತ ಪಂಚಮಸಾಲಿ ಸಮುದಾಯ.
ಈ ಬಾರಿ ಹಾಗಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ನಮ್ಮ ಹೋರಾಟಕ್ಕೆ ಬೆಲೆಕೊಟ್ಟು ನಮ್ಮ ಸಮುದಾಯಕ್ಕೆ ಟು ಎ ಮೀಸಲಾತಿಯನ್ನು ನೀಡಲೇಬೇಕು ಇಲ್ಲದಿದ್ದರೆ ಬರುವ ದಿನಮಾನಗಳಲ್ಲಿ ಈ ದೇಶದಾದ್ಯಂತ ಉಗ್ರವಾದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಉತ್ತರ ಕರ್ನಾಟಕದಿಂದ 8 ಲಿಂಗಾಯತ ಶಾಸಕರನ್ನು ನೀಡಿದ್ದೇವೆ ಅದನ್ನ ಅರಿವು ಇಟ್ಟುಕೊಂಡು ಸರ್ಕಾರ ನಮಗೆ ನ್ಯಾಯ ಕೊಡಿ ಇಲ್ಲದಿದ್ದರೆ ಇದರ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಬೀಳುತ್ತದೆ ಎಚ್ಚರಿಕೆ.
ಇದೇ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಪಂಚಮಸಾಲಿ ಸಮಾಜದ ಅಧ್ಯಕರು ಶ್ರೀಶೈಲ ದಲಾಲ. ಶಾಸಕ ಸಿದ್ದು ಸವದಿ. ಮಾಹಾದೇವ ದುಪದಾಳ. ಮಾಹಾದೇವ ಕೋಟ್ಯಾಳ. ಪ್ರಶಾಂತ ಪಾಲಬಾವಿ. ಲಕ್ಕಪ್ಪ ಪಾಟೀಲ. ಪ್ರಭು ಪೂಜಾರಿ. ಸಂಜಯ ತೆಗ್ಗಿ. ಅಮೀತ ನಾಶಿ. ವಿನಾಯಕ ಶೇಗುಣಸಿ. ಸಂಗಮೇಶ ಪಾಟೀಲ. ಪುಂಡಲೀಕ ಪಾಲಭಾವಿ.
ಸೇರಿದಂತೆ ರಬಕವಿ ಬನಹಟ್ಟಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮುದಾದ ಹಿರಿಯರು ಕಾರ್ಯಕರ್ತರು ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ