ಬೆಂಗಳೂರು:- ಕರವೇ ನಾರಾಯಣ ಸೇರಿ ಬಂಧನಕ್ಕೊಳಗಾಗಿದ್ದ 29 ಕರವೇ ಕಾರ್ಯಕರ್ತರನ್ನು ರಿಲೀಸ್ ಮಾಡಲಾಗಿದೆ.
ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಬಿರಾದಾರ್ ದೇವೇಂದ್ರಪ್ಪ ಅವರಿದ್ದ ಪೀಠ, ನಾರಾಯಣಗೌಡ ಮತ್ತು ಇತರೆ 29 ಕಾರ್ಯಕರ್ತರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ನಾಮಫಲಕ ಧ್ವಂಸ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಕರವೇ ಬೆಂಗಳೂರು ನಗರದ ಯುವ ಘಟಕದ ಅಧ್ಯಕ್ಷ ಕಾರ್ತಿಕ್ ಗೌಡ, ಕಾರ್ಯಕರ್ತರಾದ ಶರತ್, ಲೋಕೇಶ್ ಗೌಡ, ಹೇಮಂತ್ ಅವರಿಗೆ ಇತ್ತೀಚೆಗೆ ಜಾಮೀನು ಮಂಜೂರಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಗೊಂಡ ಕಾರ್ಯಕರ್ತರನ್ನು ಹಾರ ಹಾಕಿ ಪಟಾಕಿ ಸಿಡಿಸಿ ಕರವೇ ಕಾರ್ಯಕರ್ತರು ಬರಮಾಡಿಕೊಂಡರು.