ಸಾಮಾನ್ಯವಾಗಿ ಹೋರಿಗಳಿಗೆ ಭತ್ತ, ರಾಗಿ ಸೇರಿದಂತೆ ಇನ್ನೂ ಕೆಲವು ವಸ್ತುಗಳನ್ನು ನೀಡುತ್ತೇವೆ. ಆದ್ರೆ ಈ ಕೋಟಿ ಬೆಲೆಯ ಕೋಣ ದಿನಕ್ಕೆ 20 ಮೊಟ್ಟೆ ಸೇವನೆ ಮಾಡುತ್ತೆ. ಸುಮಾರು 1.5 ಟನ್ ತೂಕವಿರುವ ಈ ಕೋಣದ ಡಯಟ್ ಹೇಳಿದ್ರೆ ಶಾಕ್ ಆಗ್ತೀರಾ.
ರೈತರ ಒಕ್ಕೂಟ, ಸಮ್ಮೇಳನ, ರೈತ ಜಾತ್ರೆ ಹೀಗೆ ಹಲವಾರು ಕಾರ್ಯಕ್ರಮಗಳಲ್ಲಿ ನೋಡುಗರ ಕಣ್ಮನ ಸೆಳೆಯುವ ಹರಿಯಾಣದ ಈ ಕೋಣದ ಹೆಸರು ಅನ್ಮೋಲ್. 23 ಕೋಟಿ ರೂ. ಬೆಲೆಬಾಳುವ ಅನ್ಮೋಲ್, ಹರಿಯಾಣದ ಸುತ್ತಮುತ್ತಲಿನ ಊರುಗಳಲ್ಲಿ ತನ್ನದೇ ಹೊಸ ದಾಖಲೆಯನ್ನು ನಿರ್ಮಿಸಿದ್ದಾನೆ. ಪುಷ್ಕರ್ ಮೇಳ ಮತ್ತು ಮೀರತ್ನಲ್ಲಿ ನಡೆಯುವ ಅಖಿಲ ಭಾರತ ರೈತರ ಮೇಳ ಸೇರಿದಂತೆ ಭಾರತದಾದ್ಯಂತ ಕೃಷಿ ಮೇಳಗಳಲ್ಲಿ ಸದ್ದು ಮಾಡುತ್ತಿರುವ ಈ ಕೋಣ, ಬರೋಬ್ಬರಿ 1,500 ಕೆಜಿ ತೂಕ ತೂಗುತ್ತದೆ. ಅದರ ಗಾತ್ರ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಸದ್ದು ಮಾಡುತ್ತಿರುವ ಅನ್ಮೋಲ್ ಹೆಸರಿನ ಕೋಣ, ಹಲವು ವಿಶೇಷತೆಗಳಿಂದ ಕೂಡಿದೆ.
ಪ್ರತಿದಿನ ಮನುಷ್ಯರಂತೆ ತನ್ನ ದಿನಚರಿ ಆರಂಭಿಸುವ ಅನ್ಮೋಲ್, ಅತ್ಯಂತ ಲಕ್ಸುರಿ ಜೀವನಶೈಲಿ ನಡೆಸುತ್ತಿದೆ. ಇದರ ಒಂದು ದಿನದ ಖರ್ಚು ಬರೋಬ್ಬರಿ 1,500 ರೂ. ಇದೆ. ಕೋಣದ ಡಯಟ್ಗಾಗಿ ಡ್ರೈ ಫ್ರೂಟ್ಸ್, 20 ಮೊಟ್ಟೆ, ಹೈ ಕೆಲೋರಿ ಆಹಾರ ಅನ್ಮೋಲ್ ಕೈ-ಕಾಲನ್ನು ದಷ್ಟಪುಷ್ಟವಾಗಿಸಿದೆ. ಕೋಣವನ್ನು ತಮ್ಮ ಮನೆಯ ಮಗನಂತೆ ನೋಡಿಕೊಳ್ಳುತ್ತಿರುವ ಮಾಲೀಕ ಗಿಲ್, ಪ್ರತಿದಿನ 1,500 ರೂ. ಹಣವನ್ನು ಅದರ ಆರೋಗ್ಯ, ಡಯಟ್ಗಾಗಿಯೇ ಮೀಸಲಿಡುತ್ತಿದ್ದಾರೆ. ನಮ್ಮಂತೆಯೇ ಅದು ಕೂಡ ಉತ್ತಮ ಆರೋಗ್ಯ ಮತ್ತು ಶಕ್ತಿಯುತವಾಗಿರಲಿ ಎಂಬುದು ಗಿಲ್ ಅಭಿಪ್ರಾಯ.
ಬೆಳಗ್ಗೆ ಎದ್ದ ತಕ್ಷಣ ಶಿಸ್ತಿನಿಂದ ತನ್ನ ಆಹಾರ ಕ್ರಮ ಪ್ರಾರಂಭಿಸುವ ಅನ್ಮೋಲ್, 250 ಗ್ರಾಂ ಬಾದಾಮಿ, 30 ಬಾಳೆಹಣ್ಣು, 4 ಕೆಜಿ ದಾಳಿಂಬೆ, 5 ಕೆಜಿ ಹಾಲು ಮತ್ತು 20 ಮೊಟ್ಟೆಗಳನ್ನು ಸೇವಿಸುತ್ತದೆ. ಇದರ ಜತೆಗೆ ಹಸಿರು ಮೇವು, ತುಪ್ಪ, ಸೋಯಾಬೀನ್ ಮತ್ತು ಕಾರ್ನ್ ಅನ್ನು ಸಹ ಆನಂದಿಸುತ್ತದೆ. ಈ ವಿಶೇಷ ಆಹಾರವು ಅನ್ಮೋಲ್ ಯಾವಾಗಲೂ ಪ್ರದರ್ಶನಗಳು ಮತ್ತು ಸಂತಾನೋತ್ಪತ್ತಿಗಾಗಿ ಸಿದ್ಧವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ಕೋಣಕ್ಕೆ ದಿನಕ್ಕೆ ಎರಡು ಬಾರಿ ಸ್ನಾನ ಮಾಡಿಸುವ ಗಿಲ್, ಅದರ ತಾಯಿ ಮತ್ತು ಅಕ್ಕನನ್ನು ಮಾರಾಟ ಮಾಡಿದ್ದರಂತೆ. ಅನ್ಮೋಲ್ ತಾಯಿ (ಎಮ್ಮೆ) ದಿನಕ್ಕೆ 25 ಲೀಟರ್ ಹಾಲನ್ನು ಕೊಡುವ ಸಾಮರ್ಥ್ಯವನ್ನು ಹೊಂದಿತ್ತು ಎಂದು ಮಾಲೀಕರು ತಿಳಿಸಿದ್ದಾರೆ.