ನವದೆಹಲಿ: 17ನೇ ಲೋಕಸಭೆ ಅವಧಿಯಲ್ಲಿ ಉಭಯ ಸದನಗಳಲ್ಲಿ ಐದು ವರ್ಷಗಳ ಕಾಲ ಒಟ್ಟು 221 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 17ನೇ ಲೋಕಸಭೆ ಸಂಸತ್ ಕಲಾಪದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು,
5 ವರ್ಷಗಳಲ್ಲಿ 545 ಸಭೆಗಳಲ್ಲಿ ಸಕ್ರೀಯವಾಗಿ ಭಾಗಿಯಾಗಿದೆ ಹೇಳಿದ್ದಾರೆ. 5 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಸಮರ್ಥ ನಾಯಕತ್ವದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುವ ಸುಯೋಗಕ್ಕಾಗಿ ಕೃತಜ್ಞನಾಗಿರುತ್ತೇನೆ ಎಂದರು.
ಇವಿಎಂ ಬಳಸಿದ್ದರೆ ಪಾಕ್ ಚುನಾವಣಾ ಫಲಿತಾಂಶ ವಿಳಂಭವಾಗುತ್ತಿರಲಿಲ್ಲ : ಅಧ್ಯಕ್ಷ ಆರಿಫ್ ಅಲ್ವಿ
ಕಳೆದ 5 ವರ್ಷಗಳಲ್ಲಿ ಉಭಯ ಸದನಗಳ ವ್ಯವಹಾರಕ್ಕೆ ಕೊಡುಗೆ ನೀಡಿ, 545 ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪ್ರತಿಯೊಬ್ಬ ಸದಸ್ಯರು ಮತ್ತು ರಾಜಕೀಯ ಪಕ್ಷಗಳಿಗೆ ಜೋಶಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಉಭಯ ಸದನಗಳಿಂದ ಒಟ್ಟು 221 ಮಸೂದೆಗಳು ಅಂಗೀಕರಿಸಲ್ಪಟ್ಟಿವೆ ಮತ್ತು ಕಾಯ್ದೆಗಳಾಗಿ ಮಾರ್ಪಟ್ಟಿವೆ ಎಂದ ವಿವರಿಸಿದರು.