ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಪತ್ನಿ ಸೈರಾ ಬಾನುಗೆ ವಿಚ್ಚೇದನ ಘೋಷಿಸಿದ್ದಾರೆ. ಈ ಮೂಲಕ 29 ವರ್ಷಗಳ ವೈವಾಹಿಕ ಜೀವನ ಕೊನೆಯಾಗಿಸಿದ್ದಾರೆ.
1995ರ ಜನವರಿಯಲ್ಲಿ ರೆಹಮಾನ್ ಹಾಗೂ ಸೈರಾ ಮದುವೆ ನಡೆದಿದ್ದು. ಇದೀಗ ತಮ್ಮ 57ನೇ ವರ್ಷದಲ್ಲಿ ರೆಹಮಾನ್ ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳ ಹೆಸರು ಖತೀಜಾ ಮತ್ತು ರಹೀಮಾ. ಮಗನ ಹೆಸರು ಅಮೀನ್ ರೆಹಮಾನ್.
ಸೈರಾ ಬಾನು ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡುವ ಮೂಲಕ ಡಿವೋರ್ಸ್ ವಿಚಾರ ತಿಳಿಸಿದ್ದಾರೆ. ಎಆರ್ ರೆಹಮಾನ್ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದಾರೆ. ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಎ. ಆರ್ ರೆಹಮಾನ್ ಗಾಯಕರು ಕೂಡ ಆಗಿದ್ದಾರೆ.
ರೆಹಮಾನ್ ಒಂದು ಹಾಡಿಗೆ ಸುಮಾರು 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ರೆಹಮಾನ್ ಕೆಲವೇ ಹಾಡುಗಳಿಗೆ ಹಾಡಿದ್ದಾರೆ. ಅನೇಕ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ.
ಎಆರ್ ರೆಹಮಾನ್ ಅವರ ಒಟ್ಟು ಸಂಪತ್ತು 2100 ಕೋಟಿ ಎನ್ನಲಾಗ್ತಿದೆ. ಸ್ಟಾರ್ಟಪ್ಸ್ ಮೀಡಿಯಾದ ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ರೆಹಮಾನ್ ಅತ್ಯಂತ ಭಾರತದ ಅತ್ಯಂತ ಶ್ರೀಮಂತ ಮ್ಯೂಸಿಕ್ ಡೈರೆಕ್ಟರ್ ಎಂದು ವರದಿ ಮಾಡಿದೆ.
ಇತ್ತೀಚೆಗಷ್ಟೇ ಮುಸ್ಲಿಂ ಸಮುದಾಯದ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇಸ್ಲಾಂನಲ್ಲಿ ಮದುವೆಯು ಒಂದು ಒಪ್ಪಂದವಾಗಿದೆ. ಇದರ ಅಡಿಯಲ್ಲಿ, ವರದಕ್ಷಿಣೆ ಮೊತ್ತವನ್ನು ನಿಗದಿಪಡಿಸಲಾಗಿದೆ. ಮದುವೆ ಮುರಿದು ಬಿದ್ದಾಗ ಅಥವಾ ವಿಚ್ಛೇದನದ ಸಂದರ್ಭದಲ್ಲಿ ಮಹಿಳೆಗೆ ಈ ಮೊತ್ತದ ವರದಕ್ಷಿಣೆ ಸಿಗುತ್ತಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. 10 ಜುಲೈ 2024 ರ ಮಹತ್ವದ ತೀರ್ಪಿನಲ್ಲಿ, ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಿಆರ್ಪಿಸಿಯ ಸೆಕ್ಷನ್ 125 ರ ಆಧಾರದ ಮೇಲೆ, ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಸಹ ನಿರ್ವಹಣೆ ಭತ್ಯೆಯನ್ನು ನಿರ್ಧರಿಸುವ ಅಧಿಕಾರ ಮ್ಯಾಜಿಸ್ಟ್ರೇಟ್ಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೈರಾ ಎಆರ್ ರೆಹಮಾನ್ ಅವರಿಂದ ಜೀವನಾಂಶ ಪಡೆಯಲಿದ್ದಾರೆ ಎನ್ನಲಾಗ್ತಿದೆ. ರೆಹಮಾನ್ ಸೈರಾಗೆ ಎಷ್ಟು ಕೋಟಿ ಜೀವನಾಂಶ ನೀಡ್ತಾರೆ ಎನ್ನುವ ಪ್ರಶ್ನೆ ಶುರುವಾಗಿದೆ.
ಜೀವನಾಂಶದ ಮೊತ್ತವನ್ನು ಲೆಕ್ಕಾಚಾರ ಮಾಡುವಾಗ ನ್ಯಾಯಾಲಯಗಳು ಅನೇಕ ಅಂಶಗಳನ್ನು ಪರಿಗಣಿಸುತ್ತವೆ. ವಿಚ್ಛೇದನದ ನಂತರ ಪತಿಯ ನಿವ್ವಳ ಮಾಸಿಕ ವೇತನದ 25 ಪ್ರತಿಶತವನ್ನು ನೀಡಬೇಕಾಗುತ್ತದೆ. ಸೈರಾಗೂ ರೆಹಮಾನ್ ಕೋಟಿ ಕೋಟಿ ಜೀವನಾಂಶ ನೀಡಲಿದ್ದಾರೆ ಎನ್ನಲಾಗ್ತಿದೆ.
ವಿಚ್ಚೇದನದ ಬಗ್ಗೆ ಟ್ವೀಟ್ ಮಾಡಿರುವ ರೆಹಮಾನ್, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ.