2024ರ ಕೊನೆಯ ದಿನದ ಸಿಸಿಬಿ ಭರ್ಜರಿ ಕಾರ್ಯಾಚರಣೆ ನಡೆಸಿದೆ.
ಫೇಸ್ ಬುಕ್ ಲವ್: ಯುವತಿ ಹುಡುಕಿ ಪಾಕ್ ಗೆ ಹೋದ ಭಾರತದ ವ್ಯಕ್ತಿ ಅರೆಸ್ಟ್! ಅಂತದ್ದೇನಾಯ್ತು?
ಹೊಸವರ್ಷ ಅಂತ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಪಾರ್ಟಿ ನಡೆಯುವುದು ಸಹಜ. ಹುಡುಗರಿಂದ ತೊಡಗಿ ಹಣ್ಣು ಹಣ್ಣು ಮುದುಕರ ವರೆಗೆ ಅವರದೇ ಆದ ರೀತಿಯಲ್ಲಿ ಪಾರ್ಟಿ ಮಾಡುತ್ತಾರೆ. ಆದರೆ ಪಾರ್ಟಿಯಲ್ಲಿ ಮದ್ಯ ಮಾತ್ರವಲ್ಲದೆ ಒಂದಷ್ಟು ಜನರು ಡ್ರಗ್ಸ್ಗೆ ಮಾರು ಹೋಗುತ್ತಾರೆ. ಅಂತಹವರಿಗೆ ಮಾರಾಟ ಮಾಡಲು ಅಂತ ಥೈಲ್ಯಾಂಡ್ನಿಂದ ತರಿಸಿದ್ದ ಹೈಡ್ರೋ ಗಂಜಾವನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ
ರಕ್ಷಿತ್ ರಮೇಶ್ ಎಂಬಾತನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು, ಆತನ ಸಂಪಿಗೆಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತ ಬೆಂಗಳೂರಿನ ಪಾರ್ಟಿಗಳಿಗೆ ಪೂರೈಕೆ ಮಾಡಲು ತರಿಸಿದ್ದ ಬರೋಬ್ಬರಿ ಹದಿನಾರು ಕೆಜಿ ಗಾಂಜಾ ಸೊಪ್ಪು ಮತ್ತು ಥೈಲ್ಯಾಂಡ್ನಿಂದ ತರಿಸಿದ್ದ ಸುಮಾರು ಮೂರು ಕೆಜಿ ಹೈಡ್ರೋ ಗಾಂಜಾ ದೊರೆತಿದೆ. ಎಂಡಿಎಂಎ, ಎಲ್ಎಸ್ಡಿ ಮತ್ತು ಚರಸ್ ಎಲ್ಲ ಸೇರಿ ಸುಮಾರು 2.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ.