17 ವರ್ಷದ ಹುಡುಗಿ ಹುಚ್ಚಾಟಕ್ಕೆ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿರುವ ಘಟನೆ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಳು.
ಆಕೆ ಆಮಿಷಕ್ಕೆ ಮರುಳಾಗುವ ಹುಡುಗ್ರು ಈಗ ಪರಿತಪಿಸುವಂತಾಗಿದೆ. ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಅದ್ರಲ್ಲಿ ಕೆಲವರು ವಿವಾಹಿತರು. ಹಾಗಾಗಿ ಅವರ ಪತ್ನಿಯರಿಗೂ ಎಚ್ ಐವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ.
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ಆಕೆ ಬಡ ಕುಟುಂಬಕ್ಕೆ ಸೇರಿದ ಹುಡುಗಿ ಎಂಬುದು ಪತ್ತೆಯಾಗಿದೆ. ಹಣಕ್ಕಾಗಿ ಆಕೆ ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದರು. ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ.
ರಾಮನಗರದಲ್ಲಿ 17 ತಿಂಗಳಲ್ಲಿ 45 ಮಂದಿಗೆ ಎಚ್ಐವಿ ಸೋಂಕು ಪತ್ತೆಯಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಮಾತ್ರ 19 ಜನರು ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 30 ಪುರುಷರು ಮತ್ತು 15 ಮಹಿಳೆಯರು ಸೇರಿದ್ದಾರೆ. 30 ಪುರುಷರಲ್ಲಿ 20 ಯುವಕರು ಮಾದಕ ವ್ಯಸನಿ ಹುಡುಗಿಯಿಂದ ಸೋಂಕಿಗೆ ಒಳಗಾಗಿದ್ದಾರೆ.