ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕೈಚಳಕ ತೋರಿದ್ದ ಕಳ್ಳಿಯನ್ನ ಬಂಧಿಸಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಲಕ್ಷ್ಮಮ್ಮ ಬಂಧಿತ ಆರೋಪಿಯಾಗಿದ್ದಾಳೆ. ರಂಜಿತ ಎಂಬುವವರ ಮನೆಯಲ್ಲಿ ಹಲವು ದಿನಗಳಿಂದ ಕೆಲಸಕ್ಕಿದ್ದ ಲಕ್ಷ್ಮಮ್ಮ, ಮನೆಯಲ್ಲಿ ಯಾರು ಇಲ್ಲದ ವೇಳೆ 20 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಳು. ಈ ಹಿನ್ನೆಲೆ ರಂಜಿತ ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದರು.
HDK Tweet: ಹೆಚ್ಡಿಕೆ ಮನೆ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ: ಮಾಜಿ ಸಿಎಂ ಹೇಳಿದ್ದೇನು?!
ಸದ್ಯ ಲಕ್ಷ್ಮಮ್ಮನನ್ನು ಬಂಧಿಸಿರುವ ಪೊಲೀಸರು 20 ಲಕ್ಷಕ್ಕೂ ಅಧಿಕ ಮೌಲ್ಯದ 374 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.