ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ RD ಪಾಟೀಲ್ ಖಾತೆಗೆ 20 ಲಕ್ಷ ರೂ.ಜಮೆ ಆಗಿರೋ ಬ್ಯಾಂಕ್ ಪಾವತಿ ರಸೀದಿ ಎಲ್ಲೆಡೆ ವೈರಲ್ ಆಗಿದೆ.. ದಾಖಲೆ ಇಟ್ಟು ಮಾತಾಡ್ರೋ ಅಂತ ಮಾಧ್ಯಮಗಳ ಮುಂದೆ ಕೂಗಾಡಿದ್ದ RDಗೆ ಇದೀಗ ಉತ್ತರ ಸಿಕ್ಕಂತಾಗಿದೆ..
ನಗರದ ಆಕ್ಸಿಸ್ ಬ್ಯಾಂಕಿನ RD ಪಾಟೀಲ್ ಖಾತೆಗೆ ಫೆಬ್ರವರಿ 15 ರಂದು 20 ಲಕ್ಷ ರೂಪಾಯಿ ಜಮೆ ಆಗಿದೆ..402 ಪಿಎಸ್ಐ ನೇಮಕಾತಿ ಪರೀಕ್ಷೆ ಮುನ್ನವೇ ಈ ಹಣ ಜಮೆಯಾಗಿದೆ..
ಅದಕ್ಕೂ ಮುನ್ನ 545 ಪಿಎಸ್ಐ ನೇಮಕಾತಿಗಾಗಿ ಪರೀಕ್ಷೆ ನಡೆದು ಅಕ್ರಮ ಬಯಲಾಗಿತ್ತು..ಹೀಗಾಗಿ 402 ಪಿಎಸ್ಐ ನೇಮಕಾತಿಯನ್ನ ಸರ್ಕಾರ ತಡೆಹಿಡಿದಿತ್ತು..ಆದ್ರೆ ಅದಕ್ಕೂ ಮುನ್ನವೇ ಅಭ್ಯರ್ಥಿಯೊಬ್ಬರಿಂದ 20 ಹಣ ಪಡೆದಿದ್ದ ಅನ್ನೋ ಮಾತು ಕೇಳಿ ಬರ್ತಿದೆ..