ಇಲ್ಲೋರ್ವ ಮಹಿಳೆ ತನಗೆ ಸಿಗುವ ಗಂಡ ಎಷ್ಟೆಲ್ಲಾ ಕ್ವಾಲಿಟಿ ಹೊಂದಿರಬೇಕು ಎಂಬುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿವರಿಸಿದ್ದು, ಸಧ್ಯ ಇದು ಚರ್ಚೆಗೆ ಗ್ರಾಸವಾಗಿದೆ.
ವಾರ್ಷಿಕವಾಗಿ 1.3 ಲಕ್ಷ ರೂಪಾಯಿ ಗಳಿಸುವ ಬಿಎಡ್ ಪದವಿ ಪಡೆದಿರುವ ವಿಚ್ಛೇದಿತ ಮಹಿಳೆ ಪೋಸ್ಟ್ ಮಾಡಿದ್ದು, ಭಾರತ, ಯುಎಸ್ ಅಥವಾ ಯುರೋಪ್ನಲ್ಲಿ ನೆಲೆಸಿರುವ ಸಂಗಾತಿ ಕನಿಷ್ಠ 30 ಲಕ್ಷ ರೂಪಾಯಿ ವಾರ್ಷಿಕ ವೇತನ ಹೊಂದಿರಬೇಕು ಎಂದು ಹುಡುಕುತ್ತಿದ್ದಾರೆ.
ಇನ್ನು ತಂದೆ ತಾಯಿಯಂತೂ ಇರಲೇಬಾರದು, ವಾಸಿಸಲು 3 ಬಿಎಚ್ಕೆ ಸ್ವಂತ ಮನೆ ಇರಬೇಕು, ಮನೆಗೆಲಸವನ್ನು ತಾನು ಮಾಡುವುದಿಲ್ಲ, ಅದಕ್ಕೂ ಕೆಲಸದವರಿರಬೇಕು. ಅತ್ತೆ-ಮಾವ ಇದ್ದರೂ ಪ್ರತ್ಯೇಕವಾಗಿರಬೇಕು ಎಂದು ಹೇಳಿದ್ದಾರೆ.
ಅವರು ಸಾಫ್ಟ್ವೇರ್ ಎಂಜಿನಿಯರ್, ಎಂಬಿಎ ಅಥವಾ ಎಂಎಸ್ ಓದಿರುವ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ಇದು ಆನ್ಲೈನ್ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಆಕೆ ವಿಚ್ಛೇದಿತಳಾಗಿದ್ದರೂ, ಅವಿವಾಹಿತ ಯುವಕನನ್ನು ಹುಡುಕುತ್ತಿದ್ದಾಳೆ. ಆಕೆಯ ಪೋಷಕರು ಆಕೆಯೊಂದಿಗೆ ಇರುತ್ತಾರೆ, ಆದರೆ ಅತ್ತೆ-ಮಾವ ಅಲ್ಲ.
ಆಕೆಯ ತಿಂಗಳ ವೇತನ 11000 ಮನೆಗೆಲಸದವರೂ ಈಕೆಗಿಂತ ಹೆಚ್ಚು ಹಣ ಗಳಿಸುತ್ತಾರೆ ಎಂದು ಬರೆದಿದ್ದಾರೆ