ಹುಬ್ಬಳ್ಳಿ; ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ನಂಬಿಸಿ ನವನಗರದ ಬಸವ ಲೇಔಟ್ನ ಪ್ರೀತಿ ಮಠಪತಿ ಎಂಬುವರಿಗೆ ₹ 2.05 ಲಕ್ಷ ವಂಚಿಸಲಾಗಿದೆ.
ಚೌಬಲಿ ಶೇಟ್ ಎಂಬಾತ ತನ್ನ ಇವಿಗೋ ಫಾಸ್ಟ್ ಚಾರ್ಜಿಂಗ್ ಕಂಪನಿಯಲ್ಲಿ ಚೈನ್ ಸಿಸ್ಟಮ್ ಮಾದರಿಯಲ್ಲಿ ವಿವಿಧ ಯೋಜನೆ ಅಡಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ಪ್ರೀತಿ ಅವರಿಗೆ ಕಂಪನಿಯ ವೆಬ್ಸೈಟ್ ಲಿಂಕ್ ಕಳಿಸಿ, ಅವರ ಹೆಸರಿನಲ್ಲಿ ಖಾತೆ ತೆರದಿದ್ದಾನೆ.
ನಂತರ ಲಾಭಾಂಶದ ಹಣ ನೀಡಿ ನಂಬಿಸಿದ್ದಾನೆ. ಇದನ್ನು ನಂಬಿರುವ ಪ್ರೀತಿ ಅವರು ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ನಂತರ ವೆಬ್ಸೈಟ್ ಲಾಕ್ ಮಾಡಿ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.