ಬೆಂಗಳೂರು:- ಬೆಂಗಳೂರಿನ ಕುರುಬರಹಳ್ಳಿಯ 19ನೇ ಮೇನ್ ನಲ್ಲಿರುವ ಮನೆಯಲ್ಲಿ 18 ವರ್ಷದ ಯುವತಿ ದುರ್ಮರಣ ಹೊಂದಿದ ಘಟನೆ ಜರುಗಿದೆ.
ಎಚ್ಡಿಕೆಗೆ “ಕರಿಯ” ಅಂತ ಹೇಳಿದ್ದು ತಪ್ಪು: ಜಮೀರ್ ಹೇಳಿಕೆ ಖಂಡಿಸಿದ ಪ್ರಿಯಾಂಕ ಖರ್ಗೆ!
ಹೊಟೆಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದ 18 ವರ್ಷದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮೃತ ಭೀಮವ್ವ ಮೂಲತಃ ಯಾದಗಿರಿಯ ಕ್ಯಾತನಾಳದ ನಿವಾಸಿ. ಭಾಗ್ಯಮ್ಮ- ಮಲ್ಲಣ್ಣ ದಂಪತಿಯ ಪುತ್ರಿ. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದಳು. ಎಂದಿನಂತೆ ತನ್ನ ತಾಯಿ ಜೊತೆ ಕೆಲಸ ಹೋಗಿ ಬಂದು ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.
ಭಾಗ್ಯಮ್ಮ- ಮಲ್ಲಣ್ಣ ದಂಪತಿಗೆ ಒಟ್ಟು ನಾಲ್ವರು ಹೆಣ್ಣು ಮಕ್ಕಳು. ಈ ಪೈಕಿ ಭೀಮವ್ವ ಹಿರಿಯ ಮಗಳಾಗಿದ್ದಳು. ಭೀಮವ್ವಳ ಕುಟುಂಬ ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದು, ಭೀಮವ್ವ ಸಹ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಗಾರೆ ಕೆಲಸಕ್ಕೆ ಹೋಗುತ್ತಿದ್ದಳು.
ಎಂದಿನಂತೆ ಇಂದು ಬೆಳಗ್ಗೆ ತಂದೆ-ತಾಯಿ ಜೊತೆ ಕೆಲಸಕ್ಕೆ ಹೋಗಿದ್ದ ಭೀಮವ್ವ, ಮಧ್ಯಾಹ್ನ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ.
ಗಾರೇ ಕೆಲಸ ಮುಗಿಸಿಕೊಂಡು ತಾಯಿ ಜೊತೆಗೆ ಭೀಮವ್ವ ಮನೆಗೆ ಬಂದಿದ್ದಾಳೆ. ಬಳಿಕ ತಾಯಿ ಭಾಗ್ಯಮ್ಮ ಬೇರೆಯವರ ಮನೆ ಕೆಲಸಕ್ಕೆಂದು ಹೋಗಿದ್ದರೆ, ಮೂವರು ತಂಗಿಯರು ಮನೆ ಹೊರಗಡೆ ಆಟವಾಡಲು ಹೋಗಿದ್ದರು. ಆಗ ಮನೆಯಲ್ಲಿ ಯಾರೂ ಇಲ್ಲದ ವೇಳೆ ಭೀಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಪೊಲೀಸರಿಂದ ತನಿಖೆ ಮುಂದುವರಿದಿದೆ.