ನೋಯ್ಡಾ:- ನೋಯ್ಡಾದ ಸೆಕ್ಟರ್ 63 ರ ಬಿ ಬ್ಲಾಕ್ನಲ್ಲಿ ಶುಕ್ರವಾರ ಸಂಜೆ ತಾಯಿಯೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಬೆಂಗಳೂರು ಮಂದಿಗೆ ಮತ್ತೊಂದು ಶಾಕ್.. ಕಸ ವಿಲೇವಾರಿಗೂ ಕೊಡಬೇಕಿದೆ ಟ್ಯಾಕ್ಸ್!
ನೋಯ್ಡಾದ ಸೆಕ್ಟರ್ 63 ರ ಬಿ ಬ್ಲಾಕ್ನಲ್ಲಿ ಶುಕ್ರವಾರ ಸಂಜೆ ತಾಯಿಯೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದ 18 ತಿಂಗಳ ಮಗುವಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಅಪಘಾತದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ವರದಿಗಳ ಪ್ರಕಾರ, ಗಾಯಗೊಂಡ ಬಾಲಕಿಯನ್ನು ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ವಿಡಿಯೊದಲ್ಲಿ ಕಂಡುಬರುವ ಮಹಿಳೆಯನ್ನು ರಿಂಕಿ ಎಂದು ಗುರುತಿಸಲಾಗಿದ್ದು, ಅವರು ಕನೌಜಿಯಾ ಎಂಬ ವ್ಯಕ್ತಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ
ಘಟನೆಯ ಬಗ್ಗೆ ಸೆಕ್ಟರ್ -63 ಠಾಣೆಯ ಪೊಲೀಸರು ಸೋಶಿಯಲ್ ಮೀಡಿಯಾಗಳ ಮೂಲಕ ಮಾಹಿತಿ ಪಡೆದರು. ಘಟನೆಯ ಬಗ್ಗೆ ತಕ್ಷಣ ಗಮನ ಹರಿಸಿದ ಪೊಲೀಸರು ಗಂಭೀರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ವಾಹನವನ್ನು ಗುರುತಿಸಲಾಗಿದೆ. ಆರೋಪಿ ಕಾರು ಚಾಲಕನನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ