ಗದಗ:- ಗದಗ ಮೃಗಾಲಯದಲ್ಲಿದ್ದ 16 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿದೆ. ಅನುಸೂಯ ಸಾವನ್ನಪ್ಪಿದ ಹುಲಿ.
ಹೌದು, 16 ವರ್ಷದಿಂದ ಮೃಗಾಲಯದಲ್ಲಿ ಘರ್ಜಿಸುತ್ತಿದ್ದ ಹೆಣ್ಣು ಹುಲಿಯೊಂದು ಮೃತಪಟ್ಟ ಘಟನೆ ಗದಗದ ಬಿಂಕದಕಟ್ಟಿ ಮೃಗಾಲಯದಲ್ಲಿ ನಡೆದಿದೆ.
16 ವರ್ಷ 4 ತಿಂಗಳು ವಯಸ್ಸಿನ ಅನಸೂಯಾ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜದಿಂದ ಶನಿವಾರ ತಡರಾತ್ರಿ ಝೂನಲ್ಲಿ ಮೃತಪಟ್ಟಿದ್ದಾಳೆ. ರವಿವಾರ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು.