ಜನವರಿ ತಿಂಗಳ ರಜಾಪಟ್ಟಿಯನ್ನು ಆರ್ ಬಿಐ ಬಿಡುಗಡೆ ಮಾಡಿದೆ. ಗಣರಾಜ್ಯೋತ್ಸವ ಸೇರಿದಂತೆ ಹೊಸ ವರ್ಷದ (2024ನೇ ಸಾಲಿನ) ಮೊದಲ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 16 ದಿನಗಳ ಕಾಲ ರಜೆಯಿದೆ. 2024ನೇ ಸಾಲಿನ ಹಣಕಾಸು ಯೋಜನೆಗಳನ್ನು ಕೆಲವರು ಈಗಾಗಲೇ ರೂಪಿಸಿರುತ್ತಾರೆ.
ಹೀಗಾಗಿ ವರ್ಷದ ಮೊದಲ ತಿಂಗಳು ಬ್ಯಾಂಕ್ ಸಂಬಂಧಿ ಕೆಲಸಗಳು ಇರುತ್ತವೆ. ಉದಾಹರಣೆಗೆ 2024ನೇ ಸಾಲಿನಲ್ಲಿ ಮನೆ, ಕಾರು ಖರೀದಿಗೆ ಪ್ಲ್ಯಾನ್ ಮಾಡಿದ್ದರೆ, ಬ್ಯಾಂಕ್ ಸಾಲ ಪಡೆಯುವ ಸಂಬಂಧ ಜನವರಿ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಬೇಕಾಗಬಹುದು. ಹೀಗಾಗಿ ಜನವರಿ ತಿಂಗಳ ರಜಾಪಟ್ಟಿಯನ್ನು ನೋಡಿಕೊಂಡು ಪ್ಲ್ಯಾನ್ ಮಾಡೋದು ಉತ್ತಮ.
ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಬ್ಯಾಂಕ್ (Bank) ರಜೆಗಳನ್ನು (Holidays) ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ.1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ
3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು (Accounts Closing Holidays). ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ (Public sector), ಖಾಸಗಿ ವಲಯ (Private sector), ವಿದೇಶಿ ಬ್ಯಾಂಕುಗಳು (Foreign banks),ಕೋ-ಆಪರೇಟಿವ್ ಬ್ಯಾಂಕುಗಳು (Co-operative banks) ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ (Regional banks) ಅನ್ವಯಿಸಲಿವೆ.
ಜನವರಿ ತಿಂಗಳ ಆರ್ ಬಿಐ ರಜಾಪಟ್ಟಿ ಹೀಗಿದೆ:
ಜನವರಿ 1: ಹೊಸ ವರ್ಷದ ಮೊದಲ ದಿನ
ಜನವರಿ 7: ಭಾನುವಾರ
ಜನವರಿ 11: ಮಿಷನರಿ ಡೇ (ಮಿಜೋರಾಂ)
ಜನವರಿ 12: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳ)
ಜನವರಿ 13: ಎರಡನೇ ಶನಿವಾರ
ಜನವರಿ 14: ಭಾನುವಾರ
ಜನವರಿ 15: ಪೊಂಗಲ್ / ತಿರುವಲ್ಲುರ್ ಡೇ (ತಮಿಳುನಾಡು ಹಾಗೂ ಆಂಧ್ರ ಪ್ರದೇಶ)
ಜನವರಿ 16: ಟುಸು ಪೂಜ (ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ)
ಜನವರಿ 17: ಗುರು ಗೋವಿಂದ್ ಸಿಂಗ್ ಜಯಂತಿ
ಜನವರಿ 21: ಭಾನುವಾರ
ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 25: ಸ್ಟೇಟ್ ಡೇ (ಹಿಮಾಚಲ ಪ್ರದೇಶ)
ಜನವರಿ 26: ಗಣರಾಜ್ಯೋತ್ಸವ
ಜನವರಿ 27: ನಾಲ್ಕನೇ ಶನಿವಾರ
ಜನವರಿ 28: ಭಾನುವಾರ
ಜನವರಿ 31: ಮಿ-ಡ್ಯಾಮ್-ಮಿ-ಫಿ (ಅಸ್ಸಾಂ)