ಬೆಂಗಳೂರು: ಫೆಡೆಕ್ಸ್ ಅಂತಾರಾಷ್ಟ್ರೀಯ ಖಾಸಗಿ ಕಂಪನಿಯ ಹೆಸರಲ್ಲಿ ಬೆಂಗಳೂರಿನ ಮಹಿಳೆಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರನ್ನ ಸತತ 36 ಗಂಟೆಗಳ ಕಾಲ ವೀಡಿಯೋ ಕಾಲ್ನಲ್ಲಿ ನಿಯಂತ್ರಿಸಿದ್ದು, ಆಕೆಯ ನಗ್ನ ವೀಡಿಯೋವನ್ನ ಸೈಬರ್ ವಂಚಕರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಆ ವೀಡಿಯೋವನ್ನ ಡಾರ್ಕ್ವೆಬ್ನಲ್ಲಿ ಹಾಕುವುದಾಗಿ ಬ್ಲ್ಯಾಕ್ಮೇಲ್ ಮಾಡಲು ಶುರು ಮಾಡಿದ್ದಾರೆ. ಆಗಷ್ಟೇ ಮಹಿಳೆ ವೀಡಿಯೋ ಕರೆಯನ್ನ ಸ್ಥಗಿತಗೊಳಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ಶುರುವಾಗಿದ್ದು ಹೇಗೆ?
ಇದೇ ಏಪ್ರಿಲ್ 3 ರಂದು ಮಧ್ಯಾಹ್ನ 2:15 ರಂದು ಬೆಂಗಳೂರಿನ 29 ವರ್ಷದ ಮಹಿಳೆಯೊಬ್ಬರಿಗೆ ದೂರವಾಣಿ ಕರೆ ಬಂದಿತ್ತು. ಈ ದೂರವಾಣಿ ಕರೆ ಏಪ್ರಿಲ್ 5ರಂದು ಮಧ್ಯಾಹ್ನ 1:15 ಗಂಟೆವರೆಗೂ ಮುಂದುವರಿದಿತ್ತು. ಆಕೆ ತಾನು ವಂಚನೆಗೆ ಒಳಗಾಗಿದ್ದೇನೆ ಅನ್ನೋದು ಕನಿಷ್ಠ ಸುಳಿವು ಆಕೆಗೆ ಬರಲೇ ಇಲ್ಲ, ತಿಳಿದುಕೊಳ್ಳುವಷ್ಟರಲ್ಲೇ ಸೈಬರ್ ವಂಚಕರು 15 ಲಕ್ಷ ರೂ. ಸುಲಿಗೆ ಮಾಡಿದ್ದರು. ತಾನು ವಂಚನೆಗೆ ಒಳಗಾಗಿರುವುದು ತಿಳಿದ ಮೇಲೆ ಮಹಿಳೆ ಪೂರ್ವ ಸಿಇನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಮಹಿಳೆ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಫಿ ಪ್ರಿಯರಿಗೆ ಗುಡ್ ನ್ಯೂಸ್..! ಪ್ರತಿದಿನ 3 ಕಪ್ ಫಿಲ್ಟರ್ ಕಾಫಿ ಕುಡಿದರೆ ಡಯಾಬಿಟಿಸ್ ಕಂಟ್ರೋಲ್
ಸಂತ್ರಸ್ತೆಯನ್ನು ಆಕೆಯ ಪೋಷಕರ ಜತೆ ಮಾತನಾಡದಂತೆ ತಡೆಯಲಾಯಿತು. ಪೊಲೀಸರಿಗೆ ದೂರು ನೀಡದಂತೆ ಮಾಡಲು ಕ್ಯಾಮೆರಾವನ್ನು ಸದಾ ಆನ್ಲೈನ್ನಲ್ಲಿ ಇರಿಸುವಂತೆಯೂ ಸ್ಕ್ರೀನ್ ಶೇರಿಂಗ್ ಸದಾ ಆನ್ ಮಾಡಿ ಇಡುವಂತೆಯೂ ಸೂಚಿಸಲಾಗಿತ್ತು. ಇದರಿಂದ ಮಹಿಳೆ ಯಾರಿಗಾದರೂ ಕರೆ ಮಾಡಿದರೆ ಅಥವಾ ಸಂದೇಶ ಕಳುಹಿಸಿದರೆ ತಿಳಿಯುವ ಉದ್ದೇಶ ವಂಚಕರದ್ದಾಗಿತ್ತು. ಅದರಂತೆ ಮಹಿಳೆ ನಡೆದುಕೊಂಡಿದ್ದರು.
ಇಡೀ ದಿನ ಅವರ ಕಣ್ಗಾವಲಿನಲ್ಲಿಯೇ ನಾನಿದ್ದೆ. ಇಡೀ ದಿನ ನನ್ನನ್ನು ರಾತ್ರಿಯ ವೇಳೆಯೂ ಅವರು ನೋಡುತ್ತಿದ್ದರು. ಕ್ಯಾಮೆರಾ ಆನ್ ಮಾಡಿ ಮಲಗುವಂತೆ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದೆ. ಆಮೇಲೆ, ಕಸ್ಟಮ್ಸ್ ಅಧಿಕಾರಿಗಳು ‘ನಾರ್ಕೋಟಿಕ್ ಟೆಸ್ಟ್’ ನಡೆಸಬೇಕಿದೆ ಎಂದು ಹೇಳಿ ಆ ನೆಪದಲ್ಲಿ ಬಲವಂತವಾಗಿ ಬಟ್ಟೆ ಬಿಚ್ಚಿಸಿ ಕ್ಯಾಮೆರಾದಲ್ಲಿ ಪೋಸ್ ಕೊಡಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳು ನಡೆದ ನಂತರ ವಂಚಕರು ಬ್ಲ್ಯಾಕ್ಮೇಲ್ ಆರಂಭಿಸಿದ್ದರು. ಹಣ ವರ್ಗಾವಣೆ ಮಾಡದಿದ್ದರೆ ನಗ್ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ಹೆದರಿದ ಮಹಿಳೆ, ಏಪ್ರಿಲ್ 5 ರಂದು ಅಮೆಜಾನ್ನಲ್ಲಿ 2.04 ಲಕ್ಷ ಮತ್ತು 1.74 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದರು. ನಂತರ ಏಪ್ರಿಲ್ 5 ರಂದು ಮಧ್ಯಾಹ್ನ 3 ಗಂಟೆಯೊಳಗೆ ನಾನು 10 ಲಕ್ಷ ರೂಪಾಯಿ ನೀಡುವಂತೆಯೂ, ಒಂದು ವೇಳೆ ಹಣ ವರ್ಗಾವಣೆ ಮಾಡದಿದ್ದರೆ ವೀಡಿಯೊವನ್ನು ಡಾರ್ಕ್ ವೆಬ್ ಸೇರಿದಂತೆ ಅನೇಕರಿಗೆ ಮಾರಾಟ ಮಾಡುವುದಾಗಿ ಬ್ಲ್ಯಾಕ್ಮೇಲ್ ಮಾಡಲಾಗಿತ್ತು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆ ಏಪ್ರಿಲ್ 3ರಿಂದ 5ರ ಅವಧಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಂಚನೆಗೆ ಒಳಗಾದ ಮಹಿಳೆ ವೃತ್ತಿಯಲ್ಲಿ ವಕೀಲರಾಗಿದ್ದಾರೆ ಎನ್ನಲಾಗಿದೆ.