ಮಹಾರಾಷ್ಟ್ರ:13 ವರ್ಷದ ಬಾಲಕಿ ಅಪಹರಣ ಕೇಸ್ ಗೆ ಸಂಬಂಧಿಸಿದಂತೆ ಖತರ್ನಾಕ್ ದಂಪತಿಯನ್ನು ಇದೀಗ ಅರೆಸ್ಟ್ ಮಾಡಲಾಗಿದೆ.
ಸಿಟಿ ರವಿ-ಹೆಬ್ಬಾಳ್ಕರ್ ಪ್ರಕರಣ: ಕರ್ನಾಟಕದ “ಕೈ” ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ! ಏನದು?
ಮಹಾರಾಷ್ಟ್ರದ ಕಲ್ಯಾಣ್ನಿಂದ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯನ್ನು ಅಪಹರಿಸಿದ್ದ ದಂಪತಿಯನ್ನು ಕೋಲ್ಸೆವಾಡಿ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಪದ್ಘಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಸ್ಥಳದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ವಿಶಾಲ್ ಗಾವ್ಲಿ (35) ಮತ್ತು ಅವರ ಪತ್ನಿ ಸಾಕ್ಷಿ ಗಾವ್ಲಿ ಬಂಧಿತರು.
ಸಾಕ್ಷಿ ಎಂಬಾಕೆ ವಿಶಾಲ್ ಗಾವ್ಲಿಯ ಮೂರನೇ ಪತ್ನಿಯಾಗಿದ್ದು, ಕಳೆದ 2 ವರ್ಷಗಳ ಹಿಂದೆ ಆತನನ್ನು ಮದುವೆಯಾಗಿದ್ದಳು. ತನಿಖೆಯ ವೇಳೆ ಆರೋಪಿ ವಿಶಾಲ್ ಕ್ರಿಮಿನಲ್ ಅಪರಾಧಿ ಎಂಬುದು ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ, ಮಹಿಳೆಯರ ಮಾನಹಾನಿ, ದೌರ್ಜನ್ಯ ಸೇರಿದಂತೆ ಆತನ ವಿರುದ್ಧ ಒಟ್ಟು 4 ಪ್ರಕರಣಗಳು ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.