ಟರ್ಕಿಯ 12 ಅಂತಸ್ಥಿನ ಹೋಟೆಲ್ ಒಂದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 66 ಜನರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ 51ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡಿದ್ದು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಯುವ್ಯ ಟರ್ಕಿಯ ಸ್ಕೀ ರೆಸಾರ್ಟ್ ಹೋಟೆಲ್ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 66 ಜನರು ಸಾವನ್ನಪ್ಪಿದ್ದು 51 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಸಮಯ ಬೆಳಗಿನ ಜಾವ 3:27ಕ್ಕೆ ಕಾರ್ತಲ್ಕಾಯಾದ ಪರ್ವತದ ತುದಿಯ ರೆಸಾರ್ಟ್ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್ನ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ. ಕಟ್ಟಡದಿಂದ ಹಾರಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾಲಾ ರಜಾದಿನಗಳ ಕಾರಣ ಹೋಟೆಲ್ ಶೇಖಡ 80-90ರಷ್ಟು ತುಂಬಿತ್ತು. 230ಕ್ಕೂ ಹೆಚ್ಚು ಅತಿಥಿಗಳು ಚೆಕ್ ಇನ್ ಆಗಿದ್ದರು ಎಂದು ಹೋಟೆಲ್ನಲ್ಲಿ ಸ್ಕೀ ಸಿಬ್ಬಂದಿ ನೆಕ್ಮಿ ಕೆಪ್ಸೆಟ್ಟುಟನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಟ್ಟಡದಿಂದ ಸುಮಾರು 20 ಜನರನ್ನು ಸ್ಥಳಾಂತರಿಸಲು ಸಹಾಯ ಮಾಡಿದ್ದೇನೆ. ಆದರೆ ಹೊಗೆಯಿಂದಾಗಿ ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಕಂಡುಹಿಡಿಯುವುದು ಕಷ್ಟಕರವಾಗಿತ್ತುನಾವು ಮೊದಲ ಮಹಡಿಯಲ್ಲಿದ್ದರಿಂದ ಹೊರಗೆ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಹೋಟೆಲ್ ನಲ್ಲಿ ಮರದ ಚಾಲೆಟ್ ಶೈಲಿಯ ಹೊದಿಕೆಯನ್ನು ಹೊಂದಿರುವ 161 ಕೋಣೆಗಳ ಹೋಟೆಲ್ನ ವಿನ್ಯಾಸವು ಬೆಂಕಿ ಬೇಗನೆ ಹರಡಲು ಕಾರಣ ಎಂದು ಹೇಳಲಾಗುತ್ತಿದೆ. 30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯನ್ನು ನಿಯಂತ್ರಿಸುವ ಅಗ್ನಿಶಾಮಕ ದಳದವರ ಪ್ರಯತ್ನಗಳಿಗೆ ಅಡ್ಡಿಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹತ್ತಿರದ ಇತರ ಹೋಟೆಲ್ ನಲ್ಲಿದ್ದ ಅತಿಥಿಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.