ದಾವಣಗೆರೆ : ರಾಜ್ಯದಲ್ಲಿ ಬಿಜೆಪಿ ಎಂದಿಗೂ 114 ಕ್ಷೇತ್ರ ಗೆದ್ದು ಸರ್ಕಾರ ಮಾಡಿಲ್ಲ. ಯಾವಾಗ ಸರ್ಕಾರ ಮಾಡಿದ್ದರೂ ಏನೇನೋ ಮಾಡಿಯೇ ಅಧಿಕಾರ ಹಿಡಿದಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಯ ಕನಸು ಕಾಣುತ್ತಿರಬಹುದು. ನಮ್ಮ ಶಾಸಕರು ಯಾರೂ ದಡ್ಡರೂ ಅಲ್ಲ ಎಂದರು.
Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್ಗಳು ಯಾವುದು ಗೊತ್ತಾ?
ಕೇವಲ 105 ಶಾಸಕರಿದ್ದ ಬಿಜೆಪಿಯವರೇ ಸರ್ಕಾರ ಮಾಡಿರುವಾಗ 135 ಸ್ಥಾನ ಗೆದ್ದಿರುವ ನಾವು ಸರ್ಕಾರ ಮಾಡದೇ ಇರ್ತೀವಾ? ಬಿಜೆಪಿಯವರು ಆಪರೇಷನ್ ಕಮಲ ಕೈಬಿಟ್ಟು, ಕಾವೇರಿ ನೀರು ಹಂಚಿಕೆ, ಬರ ಪರಿಹಾರ ಇತರೆ ವಿಷಯಗಳಿಗೆ ಹೆಚ್ಚು ಕಿವಿಗೊಡಲಿ ಎಂದು ಸಲಹೆ ನೀಡಿದರು. ತುಮಕೂರು ಜಿಲ್ಲೆಯ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್ಸಿಗೆ ಸೇರಿದ್ದಾರೆ. ಬಿಜೆಪಿ–ಜೆಡಿಎಸ್ ಹೊಂದಾಣಿಕೆಯಿಂದ ಎರಡೂ ಪಕ್ಷದ ಅನೇಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಯಾರೇ ಆಗಲಿ ಪಕ್ಷದ ತತ್ವ, ಸಿದ್ಧಾಂತ ಒಪ್ಪಿಕೊಂಡು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.