ಗೂಗಲ್ ಟ್ರಾನ್ಸ್ಲೇಟ್ಗೆ ಕ್ಯಾಂಟೊನೀಸ್, ಎನ್ಕೊ ಮತ್ತು ತಮಾಜೈಟ್ ಸೇರಿದಂತೆ 110 ಹೊಸ ಭಾಷೆಗಳನ್ನು ಸೇರಿಸಿರುವುದಾಗಿ ಗೂಗಲ್ ಘೋಷಿಸಿದೆ. ವಿಶ್ವದಲ್ಲಿ ಈ ಭಾಷೆಗಳನ್ನು ಮಾತನಾಡುವ 614 ಮಿಲಿಯನ್ ಜನರಿದ್ದು ಇವರು ವಿಶ್ವದ ಒಟ್ಟಾರೆ ಜನಸಂಖ್ಯೆಯ ಶೇ 8ರಷ್ಟಿದ್ದಾರೆ.
ಈ ಭಾಷೆಗಳ ಪೈಕಿ ಸುಮಾರು ಕಾಲು ಭಾಗದಷ್ಟು ಹೊಸ ಭಾಷೆಗಳು ಆಫ್ರಿಕಾ ವಲಯದ್ದಾಗಿವೆ. ಇದರಲ್ಲಿ ಫೋನ್, ಕಿಕೊಂಗೊ, ಲುವೊ, ಗಾ, ಸ್ವಾತಿ, ವೆಂಡಾ ಮತ್ತು ವೊಲೊಫ್ ಭಾಷೆಗಳಿವೆ.
![Demo](https://ainlivenews.com/wp-content/uploads/2023/12/spoorthi-1.jpg)
2022ರಲ್ಲಿ, ಗೂಗಲ್ ಜೀರೊ-ಶಾಟ್ ಯಂತ್ರ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಲಾಗಿತ್ತು. ಈ ವಿಧಾನದಲ್ಲಿ ಯಂತ್ರ ಕಲಿಕೆ ಮಾದರಿಯು ಹಿಂದಿನ ಯಾವುದೇ ಉದಾಹರಣೆಯನ್ನು ಬಳಸದೆ ಮತ್ತೊಂದು ಭಾಷೆಗೆ ಅನುವಾದಿಸಲಾಗುತ್ತದೆ.
“ನಾವು 1,000 ಭಾಷೆಗಳ ಉಪಕ್ರಮವನ್ನು ಘೋಷಿಸಿದ್ದೇವೆ. ಇದು ವಿಶ್ವದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ (ಕೃತಕ ಬುದ್ಧಿಮತ್ತೆ) ಮಾದರಿಗಳನ್ನು ನಿರ್ಮಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಕಂಪನಿ ತಿಳಿಸಿದೆ.
ಈಗ ಸೇರ್ಪಡೆಯಾದ ಹೊಸ ಭಾಷೆಗಳಲ್ಲಿ ಪಂಜಾಬಿ (ಶಹಮುಖಿ) ಕೂಡ ಸೇರಿದೆ. ಇದು ಪರ್ಸೊ-ಅರೇಬಿಕ್ ಲಿಪಿಯಲ್ಲಿ (ಶಹಮುಖಿ) ಬರೆಯಲಾಗುವ ಪಂಜಾಬಿ ಭಾಷೆಯ ವೈವಿಧ್ಯವಾಗಿದೆ ಮತ್ತು ಪಾಕಿಸ್ತಾನದಲ್ಲಿ ಹೆಚ್ಚು ಮಾತನಾಡುವ ಭಾಷೆಯಾಗಿದೆ.
“ಟೋಕ್ ಪಿಸಿನ್ ಇಂಗ್ಲಿಷ್ ಮೂಲದ ಕ್ರಿಯೋಲ್ ಮತ್ತು ಪಪುವಾ ನ್ಯೂ ಗಿನಿಯಾದ ಆಡುಭಾಷೆಯಾಗಿದೆ. ನೀವು ಇಂಗ್ಲಿಷ್ ಮಾತನಾಡುತ್ತಿದ್ದರೆ, ಟೋಕ್ ಪಿಸಿನ್ಗೆ ಅನುವಾದಿಸಲು ಪ್ರಯತ್ನಿಸಿ – ನೀವು ಅರ್ಥವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ” ಎಂದು ಗೂಗಲ್ ತಿಳಿಸಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)