ಹುಬ್ಬಳ್ಳಿ: ಯಾವುದೇ ಸ್ವಾರ್ಥ ಬಯಸದೇ ನಿಸ್ವಾರ್ಥದಿಂದ ಮಜೇಥಿಯಾ ಫೌಂಡೇಷನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಅವರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದ ಹೃದಯ ಶ್ರೀಮಂತಿಕೆಯ ವ್ಯಕ್ತಿಯಾಗಿದ್ದಾರೆ. ಹಲವು ಕುಟುಂಬಗಳಿಗೆ ಬೆಳಕಾಗಿದ್ದಾರೆ, ದಿವ್ಯಾಂಗರಿಗೆ ಜೀವನ ಸಾಗಿಸಲು ಕೃತಕ ಅಂಗಾಂಗಳನ್ನು ನೀಡಿ ಅವರಿಗೆ ಸನ್ಮಾರ್ಗ ತೋರಿಸಿದ್ದಾರೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಾಧಿಕಾರಿ ಯಮನಪ್ಪ ಕರೇಹನುಮಂತಪ್ಪ ಸಂತಸ ಪಟ್ಟರು.
ವಾಹನ ಸವಾರರ ಗಮನಕ್ಕೆ: ಇಂದಿನಿಂದ ಎಲ್ಲ ವಾಹನಗಳಿಗೆ ಪೀಣ್ಯ ಫ್ಲೈಓವರ್ ಸಂಚಾರಕ್ಕೆ ಮುಕ್ತ!
ನಗರದ ಮಜೇಥಿಯಾ ಫೌಂಡೇಷನ್ ವತಿಯಿಂದ 105 ಜನರಿಗೆ ಕೃತಕ ಕೈ ಕಾಲು ಜೋಡಣೆ ಶಿಬಿರ ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು, ಮಜೇಥಿಯಾ ಫೌಂಡೇಷನ್ ಒಂದು ಉತ್ತಮ ಸಮಾಜಮುಖಿಯಾದ ಕಾರ್ಯ ಮಾಡತಾ ಇದೆ ಇಂದು ಅನೇಕ ಅಸಹಾಯಕರಿಗೆ ನಿರ್ಗತಿಕರಿಗೆ ವಿಕಲಾಂಗರಿಗೆ ಆಸರೆಯಾಗಿದೆ. ಜೀತೇಂದ್ರ ಮಜೇಥಿಯಾ ಅವರ ಒಳ್ಳೆಯ ಕೆಲಸ ಕಾರ್ಯಗಳು ಸದಾ ಜನರ ಮಾಸದಲ್ಲಿ ಉಳಿಯುತ್ತಿವೆ ಎಂದರು.
ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ತಜ್ಞೆ ಡಾ. ಶಿಲ್ಪಾ ಚಟ್ಟಿ ಮಾತನಾಡಿ, ಕೈ ಕಾಲು ಕಳೆದುಕೊಂಡವರು ಬದುಕಿನಲ್ಲಿ ತುಂಬಾ ಕಷ್ಟ ಅನುಭವಿಸುತ್ತಾರೆ. ದಿನ ನಿತ್ಯ ಪರಾವಲಂಬಿಯಾಗಿರುತ್ತಾರೆ. ಅಂತವರನ್ನು ಕಂಡ ಮಜೇಥಿಯಾ ಅವರು ಅವರ ಬದುಕನ್ನು ಸುಂದರಗೊಳಿಸಲು ಮುಂದಾಗಿದ್ದಾರೆ ಎಂದರು.ಆರ್ಥೋಪೆಡಿಕ್ ಸರ್ಜನ್ ಮತ್ತು ತರಬೇತಿದಾರ ಡಾ. ಸಂದೀಪ ನೀರಲಗಿ ಮಾತನಾಡಿ, ಅಂಗವಿಕಲರು ಸುಂದರವಾಗಿ ಜೀವನ ಸಾಗಿಸಲು ಸಾಧ್ಯ ಮತ್ತು ದಿವ್ಯಾಂಗರಿಗೆ ಪ್ರಾಯೋಗಿಕ ಹಾಗೂ ವಿಶೇಷ ತರಬೇತಿಯನ್ನು ನೀಡಿ ದಿವ್ಯಾಂಗರಲ್ಲಿ ಉತ್ಸಾಹ ಇಮ್ಮಡಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಜೇಥಿಯಾ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ, ಬಡವರು, ವಿಶೇಷ ಚೇತನರಿಗಾಗಿ ಫೌಂಡೇಷನ್ ಸದಾ ಸೇವೆ ಮಾಡಲು ಸಿದ್ಧ. ಸಂಸ್ಥೆಯಿಂದ ಸೇವೆ ಮಾಡಲು ಜನರ ಸಹಕಾರ ಅಮೂಲ್ಯವಾಗಿದೆ. ಜನರ ಆಶೀರ್ವಾದದಿಂದ ಸಂಸ್ಥೆ ಸಮಾಜ ಸೇವೆ ಮಾಡಲು ಸಾಧ್ಯವಾಗಿದೆ ಎಂದು ನುಡಿದರು.
ಡಾ. ವಿ.ಬಿ. ನಿಟಾಲಿ, ಎಚ್.ಆರ್. ಪ್ರಹ್ಲಾದ್ ರಾವ್, ಶಂಕರ ಕಮಟೆ, ಡಾ. ಸುನೀಲ ಕುಕ್ಕನೂರ್, ಡಾ. ನಾಗರಾಜ ಸಾನು, ಡಾ. ಶಿವಾನಿ ಪೋತದಾರ, ಡಾ. ಬಸವರಾಜ ಸಜ್ಜನ್ ಉಪಸ್ಥಿತರಿದ್ದರು.
ಹನುಮಂತ ಶಿಗ್ಗಾಂವ, ನರೇಶ ಪ್ರಜಾಪತಿ ಅವರನ್ನು ಸನ್ಮಾನಿಸಲಾಯಿತು. ಕಿಮ್ಸ್ ಸ್ವಯಂ ಸೇವಕರು, ಕಲಾವಿದರಾದ ಚಂದ್ರಶೇಖರ ಗಾಣಿಗೇರ, ಅನಿತಾ ಜಡಿ, ನವೀನ ಮಾಲಿನ ಅವರನ್ನು ಗೌರವಿಸಲಾಯಿತು.
ಡಾ. ಕೆ. ರಮೇಶ ಬಾಬು ಸ್ವಾಗತಿಸಿದರು. ಸಂಸ್ಥೆ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರೂಪಿಸಿದರು. ಅಮೃತಭಾಯ್ ಪಟೇಲ್ ವಂದಿಸಿದರು.