ಬೆಂಗಳೂರು:- ಇದು ಇಡೀ ಕರ್ನಾಟಕದ ಜನತೆಗೆ ಬಹಳ ಕಳವಳಕಾರಿ ಸಂಗತಿ. ಕೇವಲ ಒಂದು ವರ್ಷದಲ್ಲಿ ನೆಲಮಂಗಲ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೂ ಈ ವರ್ಷ ಮುಗಿಯಲು ಒಂದು ತಿಂಗಳು ಬಾಕಿ ಇರುವಾಗಲೇ ಅಸ್ವಾಭಾವಿಕ ಸಾವು ಸೇರಿದಂತೆ ಒಟ್ಟು 1289 ಪ್ರಕರಣಗಳ ದಾಖಲಾಗಿವೆ. ಈ ಮೂಲಕ ರ್ನಾಟಕದಲ್ಲೇ ಈ ಠಾಣೆ ಮೊದಲ ಸ್ಥಾನದಲ್ಲಿದೆ.
ಬೆಂಗಳೂರು ಫ್ಯಾನ್ಸ್ ಗೆ ಗುಡ್ ನ್ಯೂಸ್: ರಜತ್ ಪಾಟಿದರ್ ಭರ್ಜರಿ ಬ್ಯಾಟಿಂಗ್!
1289 ಪ್ರಕರಣಗಳ ಪೈಕಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು 1005 FIR ದಾಖಲಾಗಿದ್ದರೆ, 284 ಅಸ್ವಾಭಾವಿಕ ಸಾವು ದೂರು ದಾಖಲಾಗಿವೆ. ಇದರೊಂದಿಗೆ ಒಟ್ಟು ಈ ಠಾಣೆಯಲ್ಲಿ 1289 ಪ್ರಕರಣಗಳು ದಾಖಲಾಗಿವೆ. ಒಂದು ವರ್ಷಕ್ಕೆ ಒಂದು ತಿಂಗಳು ಬಾಕಿರುವಾಗಲೇ ಎಫ್ಐಆರ್ ಸಾವಿರದ ಗಡಿದಾಟಿದ್ದು, ಕರ್ನಾಟಕದಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿರುವ ಪಟ್ಟಿಯಲ್ಲಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೊದಲ ಸ್ಥಾನ ಪಡೆದುಕೊಂಡಿದೆ.
ಇನ್ನು ದ್ವಿತೀಯ ಸ್ಥಾನ ಕೆಆರ್ ಪುರಂ ಪೊಲೀಸ್ ಠಾಣೆ (1178 ಪ್ರಕರಣ), ತೃತೀಯ ಸ್ಥಾನ ಮಹದೇವಪುರ ಪೊಲೀಸ್ ಠಾಣೆ (1152), ನಾಲ್ಕನೇ ಸ್ಥಾನ HAL ಪೊಲೀಸ್ ಠಾಣೆ (1122), ಇನ್ನೂ ಐದನೇ ಸ್ಥಾನದಲ್ಲಿ ಮಾರತ್ತಹಳ್ಳಿ ಪೊಲೀಸ್ ಠಾಣೆ (1020) ಇದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಅನೇಕ ಜಿಲ್ಲೆಗಳಿಗೆ ಸಂಪರ್ಕ ಹೊಂದಿರುವ ಬೆಂಗಳೂರು ಗೇಟ್ವೇ ಕೂಡ ಇದೇ ಆಗಿದೆ. ಇದರಿಂದ ದಾಖಲಾದ ಅಪರಾಧಗಳನ್ನು ಸಮರ್ಪಕವಾಗಿ ತನಿಖೆ ಮಾಡಲು ಸಿಬ್ಬಂದಿಗಳಿಗೆ ಕಷ್ಟವಾಗುತ್ತಿದೆ. ಒಂದು ಪೊಲೀಸ್ ಠಾಣೆಯಲ್ಲಿ ಸಾವಿರಗಟ್ಟಲೇ FIR ದಾಖಲಾದರೆ ತನಿಖೆ ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಉದ್ಭವಿಸುತ್ತವೆ.
ನಗರಕ್ಕೆ ಹೊಂದಿಕೊಂಡಂತೆ 77 ಹಳ್ಳಿಗಳು, 35ಕ್ಕೂ ಹೆಚ್ಚು ಲೇಔಟ್ಗಳು, 10ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ವಾಸಿಸುವ ಐಷಾರಾಮಿ ಅಪಾರ್ಟ್ಮೆಂಟ್ ಗಳು ಸೇರಿದಂತೆ ಸುಮಾರು 5ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಇನ್ನೂ ಪೊಲೀಸ್ ಠಾಣೆ ನಿರ್ಮಾಣ ಮಾಡಲು ನಿರ್ದಿಷ್ಟ ಜನಸಂಖ್ಯೆಯು ಭಾರತದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಆದಾಗ್ಯೂ, ಭಾರತ ಸರ್ಕಾರವು ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಾಮಾನ್ಯ ಮಾರ್ಗಸೂಚಿಗಳನ್ನು ನೀಡಿದೆ.
ಸಾಮಾನ್ಯವಾಗಿ ಪೊಲೀಸ್ ಠಾಣೆಯು ಒಂದು ಲಕ್ಷದಿಂದ ಐದು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿರಬಹುದು. ಆದಾಗ್ಯೂ, ನಗರ ಪ್ರದೇಶಗಳಲ್ಲಿ ಜನಸಂಖ್ಯೆಯ ಅಧಾರದ ಮೇಲೆ ಹೊಸ ಹೊಸ ಪೊಲೀಸ್ ಠಾಣೆಯನ್ನ ಮಾನದಂಡಗಳ ಅಧಾರದ ಮೇಲೆ ಕಾರ್ಯರಂಭ ಮಾಡಲಾಗಿದೆ. ಇದರ ಹೊರತುಪಡಿಸಿ ಕರ್ನಾಟಕ ರಾಜ್ಯದಲ್ಲಿ, ಪೊಲೀಸ್ ಠಾಣೆಯು ಸಾಮಾನ್ಯವಾಗಿ ಒಂದು ಲಕ್ಷದಿಂದ ಮಿತಿಮೀರಿ ಮೂರು ಲಕ್ಷದವರೆಗಿನ ಜನಸಂಖ್ಯೆಯನ್ನು ಹೊಂದಿದೆ. ಹೀಗಾಗಿ ವರ್ಷಕ್ಕೆ ಇನ್ನೂ ತಿಂಗಳು ಬಾಕಿ ಇರುವಾಗಲೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಒಂದರಲ್ಲಿಯೇ 1006 ಪ್ರಕರಣಗಳು ದಾಖಲಾಗಿದೆ.