ಬೆಂಗಳೂರು:- ಸರ್ಕಾರ ಕೆಡವಲು 100 ಕೋಟಿ ರೂ. ಆಫರ್ ವಿಚಾರವಾಗಿ ಸಿ.ಟಿ ರವಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಬಂದಿದೆ ಎಂಬ ಸಿಎಂ ಹೇಳಿಕೆ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು. ಯಾರೆಲ್ಲಾ ಶಾಸಕರು ತಮಗೆ ಆಫರ್ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೋ ಅವರ ಮಂಪರು ಪರೀಕ್ಷೆ ಮಾಡಿಸಬೇಕು ಎಂದರು.
ಅಯ್ಯೋ ಶಿವ ಇದು ಇಲಿಗಳ ಕೋಟೆ: ರಾತ್ರೋ ರಾತ್ರಿ ಸತ್ತ ವ್ಯಕ್ತಿಯ ಕಣ್ಣು ಮಾಯ! ಏನಾಯ್ತು!?
ಸಿಎಂ ಅವರು ನಮ್ಮ ಮೇಲೆ ಶಾಸಕರ ಖರೀದಿ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ವಿಚಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಗಂಭೀರವಾಗಿದ್ದು, ಖುದ್ದು ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಿದೆ. ಸಿಎಂ ಹೇಳಿಕೆ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಇನ್ನೂ ಗಣಿಗ ರವಿ ಸೇರಿ ಯಾರ್ಯಾರು ಶಾಸಕರು ತಮಗೆ ಆಫರ್ ಬಂದಿದೆ ಎಂದು ಹೇಳ್ತಿದ್ದಾರೋ ಆ ಎಲ್ಲ ಶಾಸಕರ ಮಂಪರು ಪರೀಕ್ಷೆ ಮಾಡಿಸಬೇಕು. ಕಾಂಗ್ರೆಸ್ ಶಾಸಕರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಗೊತ್ತಾಗುತ್ತೆ ಎಂದು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಬಿಜೆಪಿಯಿಂದ ಯಾರು ಇವರನ್ನ ಸಂಪರ್ಕಿಸಿದ್ರು, ಯಾವಾಗ, ಏನು ಆಫರ್ ಕೊಟ್ಟಿದ್ದರು ಅನ್ನೋದು ಮಂಪರು ಪರೀಕ್ಷೆಯಲ್ಲಿ ಗೊತ್ತಾಗುತ್ತೆ. ಸಿಎಂ ಇಂಥ ಗಂಭೀರ ಆರೋಪ ಮಾಡಿ ಯಾಕೆ ಸುಮ್ಮನಿದ್ದಾರೆ? ಅವರ ಹೇಳಿಕೆಗೆ ಆಧಾರ ಇಲ್ಲ ಅಂತ ಸಿಎಂ ಸುಮ್ಮನಿದ್ದಾರಾ? ಸಿಎಂ ತಾವೇ ಮಾಡಿರುವ ಆರೋಪ ಬಗ್ಗೆ ತನಿಖೆ ನಡೆಸಲಿ, ಎಸ್ಐಟಿ ರಚಿಸಿ ತನಿಖೆಗೆ ಕೊಡಲಿ ಎಂದು ಆಗ್ರಹಿಸಿದ್ದಾರೆ.