ಬೆಂಗಳೂರು: ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೇನು ಜನವರಿಗೆ ನಿವೃತ್ತಿ ಪಡೆದು ನೆಮ್ಮದಿಯಾಗಿರಬೇಕು ಅಂದುಕೊಂಡಿದ್ರು…ಅದ್ರೆ ಅದೊಂದು ಜಮೀನು ವಿಚಾರದಲ್ಲಿ ಅವರಿಗೆ ಆದ ಮೋಸದಿಂದ ಡಿಪ್ರೆಶನ್ ಗೆ ಹೋಗಿದ್ರು. ಅದೊಬ್ಬ ರಾಜಕಾರಣಿ ಮಾಡಿದ ವಂಚನೆಗೆ ಬೇಸತ್ತು ಸೂಸೈಡ್ ಮಾಡ್ಕೊಂಡಿದ್ದಾರೆ ಅನ್ನೋ ಶಂಕೆ ಸದ್ದು ಮಾಡ್ತಿದೆ.. ಹಾಗಾದ್ರೆ ಶಿಕ್ಷಕನ ಸಾವಿಗೆ ಏನು ಕಾರಣ ಅನ್ನೋದನ್ನ ಹೇಳ್ತಿವಿ ನೋಡಿ.
ಯೆಸ್.. ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯ ಪಾರ್ಕಿಂಗ್ ನಲ್ಲಿ ನೇಣು ಬಿಗಿದುಕೊಂಡು ನರಸಿಂಹಮೂರ್ತಿ ಎಂಬ ಶಿಕ್ಷಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಯಶವಂತಪುರ ಶಾಸಕ ಎಸ್ ಟಿ ಸೋಮಶೇಖ ಬೆಂಬಲಿಗ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಎಂಬುವವರ ವಿರುದ್ಧ ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ರೈತರಿಗೆ ಗುಡ್ ನ್ಯೂಸ್: “ಕೃಷಿ ಸಿಂಚಾಯಿ ಯೋಜನೆ”ಯಡಿಯಲ್ಲಿ ನಿಮಗೆ ಸಿಗಲಿದೆ ಶೇ. 90 ರಷ್ಟು ಸಹಾಯ ಧನ!
ಹೌದು.. ಹೊಸಕೋಟೆಯ ಜಡಗನಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದ ನರಸಿಂಹಮೂರ್ತಿ, ಜನವರಿ 15ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಮಾಗಡಿ ರಸ್ತೆಯ ತುಂಗಾನಗರದಲ್ಲಿ ನರಸಿಂಹಮೂರ್ತಿ ಅವರು 25ಗುಂಟೆ ಜಮೀನು ಹೊಂದಿದ್ದರು. ಆ ಜಮೀನನ್ನ 10 ಕೋಟಿಗೆ ಖರೀದಿಸುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡ ಸತೀಶ್ ಎಂಬುವವರು 10 ಲಕ್ಷ ರೂ ನೀಡಿ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆದರೆ ಉಳಿದ ಹಣವನ್ನ ನೀಡದೆ ಜಮೀನು ಲಪಟಾಯಿಸಿದ್ದು, ಹಣ ಕೇಳಲು ಹೋದಾಗ ಧಮ್ಕಿ ಹಾಕಿದ್ದಾರೆ ಎಂದು ಸತೀಶ್ ವಿರುದ್ಧ ಆರೋಪಿಸಿರುವ ನರಸಿಂಹಮೂರ್ತಿ ಮನನೊಂದು ಗುರುವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರಂತೆ. ಹೊಸಹಳ್ಳಿಯ ಸತೀಶ್ ಸಾಕಷ್ಟು ಪ್ರಭಾವಿಯಾಗಿದ್ದು ನರಸಿಂಹಮೂರ್ತಿಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಕ್ಕಿಲ್ಲ ಎಂದ ಆರೋಪಿಸಿ ನರಸಿಂಹಮೂರ್ತಿ ಸತೀಶ್.
ಸೇರಿದಂತೆ ಇಬ್ಬರ ಹೆಸರನ್ನ ಬರೆದಿಟ್ಟು ಇಂದು ನೇಣಿಗೆ ಶರಣಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತರ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.