ಧಾರವಾಡ, : ರೈತ ಗಂಗಪ್ಪ ಕಾಲವಾಡ ಬಳಿ 10 ಎಕರೆ ಜಮೀನು ಇದೆ. ಆದರೆ ಅಕಾಲಿಕ ಮಳೆ, ಪ್ರವಾಹ ಮತ್ತು ಬರ ಪರಿಸ್ಥಿತಿಯಿಂದ ಕೃಷಿ ಕಾಯಕ ನಿಂತು ಹೋಗುವ ಸ್ಥಿತಿಗೆ ಬಂದಿತ್ತು. ಆದರೆ ಈಗ ಅವರು ಮಾದರಿ ರೈತರಾಗಿ ಬದಲಾಗಿದ್ದಾರೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಬಳಕೆ ಮಾಡಿಕೊಂಡು ಯಶಸ್ಸುಗಳಿಸಿದ್ದಾರೆ.
ಬೆಂಗಳೂರು: ಜೂಜಿಗಾಗಿ ಕಳ್ಳತನಕ್ಕೆ ಇಳಿದವನ ಹೆಡೆಮುರಿ ಕಟ್ಟಿದ ಪೊಲೀಸ್!
ಶಾಸಕ ಎನ್. ಎಚ್. ಕೋನರಡ್ಡಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು, ಅಧಿಕಾರಿಗಳು ಕುರಿ ಸಾಕಾಣಿಕೆಯಲ್ಲಿ ಮಾದರಿಯಾದ ಮೊರಬ ಗ್ರಾಮದ ರೈತ ಗಂಗಪ್ಪ ಕಾಲವಾಡ ಅವರ ಕುರಿಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಗತಿಪರ ರೈತನ ಸಾಹಸಕ್ಕೆ ಮೆಚ್ಚುಗೆ ಸೂಚಿಸಿದರು. “ರೈತರು ಕೃಷಿ ಜೊತೆಗೆ ಉಪ ಕೃಷಿ ಚುಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಲಾಭದಾಯಕತೆ ಹೊಂದಲು ಸಹಾಯವಾಗುತ್ತದೆ. ಹವಾಮಾನ ವೈಪರಿತ್ಯದಿಂದಾಗಿ ಬೆಳೆಗಳಲ್ಲಿ ಬದಲಾವಣೆ ಆಗುತ್ತಿವೆ. ಇದರಿಂದ ಉತ್ಪಾದನೆ, ಲಾಭದ ಮೇಲೂ ಪರಿಣಾಮ ಬೀರುತ್ತಿದೆ” ಎಂದರು.
ರೈತರು ಕೃಷಿ ಜೊತೆಗೆ ಕುರಿ-ಆಡು ಸಾಕಾಣಿಕೆ, ಹೈನುಗಾರಿಕೆ, ತೋಟಗಾರಿಕೆ, ಸಾವಯವ ಧಾನ್ಯ, ಮಿಶ್ರ ಬೆಳೆ, ಅವಕಾಶವಿದ್ದಲ್ಲಿ ಮೀನುಗಾರಿಕೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಒಂದರಲ್ಲಿ ನಷ್ಟವಾದರೂ ಇನ್ನೊಂದು ಕೈ ಹಿಡಿಯುತ್ತದೆ. ಇಲಾಖೆಯಿಂದ ಹೆಚ್ಚುಹೆಚ್ಚು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.