ಧಾರವಾಡ;- ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಹಿನ್ನೆಲೆ ಮಲಪ್ರಭಾ ಜಲಾಶಯದಿಂದ 1 ಟಿಎಂಸಿ ನೀರು ಬಿಡುಗಡೆ ಆಗಿದೆ.
ಈ ಸಂಬಂಧ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಇಂದಿನಿಂದ 9 ದಿನಗಳ ಕಾಲ ಈ ನೀರು ಹರಿಯಲಿದೆ. ಈಗಾಗಲೇ ಹಿಂದೆ 81 ಕೆರೆ ತುಂಬಿಸಿದ್ದೇವು. ಅದರಲ್ಲಿ ಸುಮಾರು 50 ಕೆರೆಗಳಲ್ಲಿ ಅರ್ಧದಷ್ಟು ನೀರಿದೆ.ಅಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ಆದರೆ 32 ಕೆರೆಗಳು ಅರ್ಧಕ್ಕಿಂತ ಕಡಿಮೆ ನೀರು ಹೊಂದಿವೆ. ಅಂತಹುಗಳಿಗೆ ಈಗ ತುಂಬಿಸಿಕೊಳ್ಳಲು ಆದ್ಯತೆ ನೀಡಲಾಗಿದೆ. ಕುಂದಗೋಳ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಗ್ರಾಮೀಣಕ್ಕೆ ನೀರು ಸಮಸ್ಯೆ ಬಗೆಹರೆಯಲಿದೆ. ಇದರಿಂದ ಮುಂದಿನ 5-6 ತಿಂಗಳವರೆಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಮಲಪ್ರಭಾ ಜಲಾಶಯದಲ್ಲಿ 15 ಟಿಎಂಸಿ ನೀರು ಇದೆ ಅಂತಾ ಮಾಹಿತಿ ಇದೆ. ಈ ಸಲ ಕೃಷಿಗಾಗಿ ನೀರು ಬಿಡಲು ಆಗುವುದಿಲ್ಲ. ಕುಡಿಯುವ ನೀರಿಗಾಗಿ ಮಾತ್ರ 1 ಟಿಎಂಸಿ ನೀರು ಬಿಡುತ್ತಿದ್ದಾರೆ.
ಕುಡಿಯುವ ನೀರಿಗೆ ಮಾತ್ರ ಆದ್ಯತೆ ಇದೆ. ಆದರೆ ಕಾಲುವೆ ನೀರು ಯಾರೂ ಕೃಷಿ ಬೆಳೆಗೆ ಬೆಳೆಸುವಂತಿಲ್ಲ. ಇದರ ಬಗ್ಗೆ ನಿಗಾ ವಹಿಸಲು ತಂಡ ಮಾಡುತ್ತಿದ್ದೇವೆ. ಕಂದಾಯ, ಆರ್ಡಿಪಿಆರ್ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ತಂಡ ಮಾಡುತ್ತಿದ್ದೇವೆ ಎಂದರು.