ನಟನೆಯ ಮೂಲಕ ಗಮನ ಸೆಳೆದ ವಿಜಯ್ ಸೇತುಪತಿ ರಿಯಲ್ ಲೈಫ್ ನಲ್ಲೂ ಹಿರೋ ಆಗಿ ಮಿಂಚಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘ ಕ್ಕೆ ಬರೋಬ್ಬರಿ 1.30 ಕೋಟಿ ರೂ. ಸಂಭಾವನೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ವಿಚಾರ ವಿಜಯ್ ಸೇತುಪತಿ ಅಭಿಮಾನಿಗಳಿಗೆ ಖುಷಿ ನೀಡಿದೆ.
ದಕ್ಷಿಣ ಭಾರತದ ಚಲನಚಿತ್ರ ಕಾರ್ಮಿಕರ ಸಂಘದ ಸದಸ್ಯರ ಮನೆ ನಿರ್ಮಾಣಕ್ಕಾಗಿ ವಿಜಯ್ ಸೇತುಪತಿ ದೇಣಿಗೆ ಹಸ್ತಾಂತರಿಸಿದ್ದಾರೆ. ಚಿತ್ರರಂಗದ ಬೆನ್ನುಲುಬಾಗಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರು, ತಂತ್ರಜ್ಞರಿಗೆ ನೆರವಾಗಲು ಈ ದೇಣಿಗೆಯನ್ನು ಬಳಸಲಾಗುತ್ತದೆ. 1.30 ಕೋಟಿ ರೂ. ಮೊತ್ತವನ್ನು ಅವರು ಚೆನ್ನೈಯ ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಸೌತ್ ಇಂಡಿಯಾಕ್ಕೆ ಹಸ್ತಾಂತರಿಸಿದ್ದಾರೆ.
ಟ್ರೇಡ್ ಅನಲಿಸ್ಟ್ ರಮೇಶ್ ಬಾಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ವಿಜಯ್ ಸೇತುಪತಿ 1.30 ಕೋಟಿ ರೂಪಾಯಿ ಹಣವನ್ನು ಯೂನಿಯನ್ಗೆ ನೀಡಿದ್ದು, ಮನೆ ನಿರ್ಮಾಣ ಆಗಲಿದೆ. ಈ ಅಪಾರ್ಟ್ಮೆಂಟ್ಗೆ ವಿಜಯ್ ಸೇತುಪತಿ ಅವರ ಹೆಸರು ಇಡಲಾಗುತ್ತದೆ’ ಎಂದು ರಮೇಶ್ ಬಾಲಾ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ವಿಜಯ್ ಸೇತುಪತಿ ಅವರು 2024ರಲ್ಲಿ ಹಲವು ಸಿನಿಮಾಗಳು ರಿಲೀಸ್ ಕಂಡವು. ‘ಮೇರಿ ಕ್ರಿಸ್ಮಸ್’ ಸಿನಿಮಾ ಮೆಚ್ಚುಗೆ ಪಡೆಯಿತು. ಕತ್ರಿನಾ ಕೈಫ್ ಜೊತೆ ಅವರು ತೆರೆ ಹಂಚಿಕೊಂಡರು. ಅವರ ನಟನೆಯ ‘ಮಹರಾಜ’ ಚಿತ್ರ ಸೂಪರ್ ಹಿಟ್ ಆಯಿತು. ‘ವಿಡುದಲೈ 2’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೆಸರು ಮಾಡಲಿಲ್ಲ. 2025ರಲ್ಲಿ ವಿಜಯ್ ನಟನೆಯ ಹಲವು ಸಿನಿಮಾಗಳು ರಿಲೀಸ್ ಆಗಲಿವೆ. ‘ಗಾಂಧಿ ಟಾಕ್ಸ್’ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇದು ಮೂಕಿ ಚಿತ್ರ ಅನ್ನೋದು ವಿಶೇಷ. ಈ ಚಿತ್ರದ ರಿಲೀಸ್ ದಿನಾಂಕ ಇನ್ನೂ ರಿವೀಲ್ ಆಗಿಲ್ಲ.