ಬಾಲಿವುಡ್ ನಟಿ ಇಶಾ ಡಿಯೋಲ್ ಇತ್ತೀಚೆಗೆ ಪತಿ ಭರತ್ ರಿಂದ ದೂರವಾಗಿದ್ದಾರೆ. ಈ ವಿಷಯವನ್ನು ಸ್ವತಃ ಇಶಾ ಹಾಗೂ ಭರತ್ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟಪಡಿಸಿದ್ದಾರೆ. ಇದೀಗ ಇಶಾ ಡಿಯೋಲ್ ರಾಜಕೀಯದತ್ತ ಮುಖ ಮಾಡಿದ್ದಾರೆ.
ಉದ್ಯಮಿ ಭರತ್ ಜೊತೆ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಮೇಲೆ ಇಶಾ ರಾಜಕೀಯಕ್ಕೆ ಎಂಟ್ರಿಕೊಡ್ತಾರೆ ಎಂಬ ಸುದ್ದಿ ಕೇಳಿ ಬರ್ತಿದೆ. ಇಷ್ಟೇಲ್ಲಾ ಸುದ್ದಿಯಾಗಲು ಹೇಮಾ ಮಾಲಿನಿ ನೀಡಿರುವ ಹೇಳಿಕೆ ಕಾರಣವಾಗಿದೆ. ಮಗಳಿಗೆ ರಾಜಕೀಯಕ್ಕೆ ಬರಲು ಆಸಕ್ತಿಯಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಮಥುರಾದಿಂದ ಬಿಜೆಪಿಯ ಲೋಕಸಭೆ ಸದಸ್ಯೆಯಾಗಿರುವ ಹೇಮಾ ಮಾಲಿನಿ ಅವರು ಸಂದರ್ಶನವೊಂದರಲ್ಲಿ ನಾನು ರಾಜಕೀಯದಲ್ಲಿ ಬೆಳೆಯಲು ಕುಟುಂಬದ ಬೆಂಬಲವಿದೆ. ಅವರ ಸಾಥ್ನಿಂದಲೇ ನಾನು ಆರಾಮ ಆಗಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳು ಕೂಡ ರಾಜಕೀಯಕ್ಕೆ ಬರುವ ಆಸಕ್ತಿ ತೋರಿಸಿದರೆ ಬರಲಿ ಎಂದಿದ್ದಾರೆ. ಈ ಮೂಲಕ ಇಶಾ ರಾಜಕೀಯ ಎಂಟ್ರಿಕೊಡುವ ಸುಳಿವನ್ನು ನೀಡಿದ್ದಾರೆ.