ಬಹುಭಾಷಾ ನಟಿ ಮೀರಾ ಜಾಸ್ಮಿನ್ ಅವರ ತಂದೆ ನಿಧನರಾಗಿದ್ದಾರೆ. ಈ ವಿಷಯವನ್ನು ಸ್ವತಃ ಮೀರಾ ಜಾಸ್ಮಿಕ್ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ.
ಮೀರಾ ತಂದೆ ಜೋಸೆಫ್ ಫಿಲಿಪ್ ಅವರಿಗೆ 83 ವರ್ಷ ವಯಸ್ಸಾಗಿದ್ದು, ಕೇರಳದ ಎರ್ನಾಕುಲಂ ನಲ್ಲಿ ನಿಧನರಾಗಿದ್ದಾರೆ. ತಂದೆಯ ಜೊತೆಗಿರುವ ಫೋಟೋ ಹಂಚಿಕೊಂಡಿರುವ ನಟಿ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಮೀರಾ ಜಾಸ್ಮಿನ್ ಅವರ ತಂದೆ ಜೋಸೆಫ್ ಫಿಲಿಪ್ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ತಾನು ಸಿನಿಮಾ ರಂಗಕ್ಕೆ ಬರುವುದರ ಹಿಂದೆ ತನ್ನ ತಂದೆಯ ಸಾಕಷ್ಟು ಪ್ರೋತ್ಸಾಹ ಹಗೂ ಬಲವಾದ ಒತ್ತಾಸೆ ಇತ್ತು ಎಂದು ಮೀರಾ ಜಾಸ್ಮಿಕ್ ಸಾಕಷ್ಟು ಭಾರಿ ಹೇಳಿದ್ದರು.