ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ‘ಪೋಷಕರ ಲೈಂಗಿಕತೆ’ ಬಗ್ಗೆ ಹೇಳಿಕೆ ನೀಡಿ ರಣವೀರ್ ಅಲ್ಲಾಬಾಡಿಯಾ ಸಾಕಷ್ಟು ವಿವಾದಕ್ಕೆ ಸೃಷ್ಟಿಸಿದ್ದಾರೆ. ಈಗಾಗಲೇ ಸಮಯ್ ಹಾಗೂ ರಣವೀರ್ ವಿರುದ್ಧ ದೂರುಗಳು ದಾಖಲಾಗಿವೆ. ಪೋಷಕರ ಬಗ್ಗೆ ನನ್ನ ಹೇಳಿಕೆಯು ಅಸೂಕ್ಷ್ಮ ಮತ್ತು ಅಗೌರವದಿಂದ ಕೂಡಿತ್ತು. ಉತ್ತಮವಾಗಿ ಕಾರ್ಯನಿರ್ವಹಿಸುವುದು ನನ್ನ ನೈತಿಕ ಜವಾಬ್ದಾರಿ. ಅದಕ್ಕೆ ನಾನು ನಿಜವಾಗಿಯೂ ವಿಷಾದಿಸುತ್ತೇನೆ ಎಂದು ರಣವೀರ್ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ರಣವೀರ್ ಅಲ್ಲಾಹಬಾಡಿಯಾ ಒಬ್ಬ ಯೂಟ್ಯೂಬರ್ ಆಗಿದ್ದು, ಜನಪ್ರಿಯ ವ್ಯಕ್ತಿಗಳೊಂದಿಗೆ ಪಾಡ್ಕ್ಯಾಸ್ಟ್ ಶೋಗಳನ್ನು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಅನುಯಾಯಿಗಳನ್ನು ಹೊಂದಿರುವ ಯೂಟ್ಯೂಬರ್ ದಿನದಿಂದ ದಿನಕ್ಕೆ ಜನಪ್ರಿಯರಾಗುತ್ತಿದ್ದರು. ಆದರೆ, ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ನಂತರ, ಅವರ ಜೀವನವು ಅಸ್ತವ್ಯಸ್ತವಾಗಿದೆ. ಯೂಟ್ಯೂಬರ್ ರಾಷ್ಟ್ರವ್ಯಾಪಿ ಮಟ್ಟದಲ್ಲಿ ಹಲವಾರು ಎಫ್ಐಆರ್ಗಳು ಮತ್ತು ಆನ್ಲೈನ್ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದ್ದಾರೆ.
ಇದೀಗ ಮತ್ತೊಂದು ಕ್ಷಮೆಯಾಚನೆಯ ವಿಡಿಯೋ ಮಾಡಿರುವ ಯೂಟ್ಯೂಬರ್ ರಣವೀರ್ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ಮತ್ತು ಸೂಕ್ತ ಕಾರ್ಯವಿಧಾನವನ್ನು ಅನುಸರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ವಿವಾದದ ನಂತರ ಕೊಲೆ ಬೆದರಿಕೆಗಳ ಬಗ್ಗೆ ರಣವೀರ್ ಅಲ್ಲಾಬಾಡಿಯಾ ಮಾತನಾಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ರಣವೀರ್ ಅಲ್ಲಾಬಾಡಿಯಾ ಕ್ಷಮೆ ಯಾಚನೆಯನ್ನು ಪೋಸ್ಟ್ ಮಾಡಿದ್ದಾರೆ. ನಾನು ವಿವಾದದ ಬಗ್ಗೆ ಪೊಲೀಸರೊಂದಿಗೆ ಸಹಕರಿಸುತ್ತಿದ್ದೇನೆ ಮತ್ತು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಫೆಬ್ರವರಿ 11ರಂದು, ರಣವೀರ್ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕುರಿತು ತಮ್ಮ ಕಾಮೆಂಟ್ಗಳಿಗೆ ಕ್ಷಮೆಯಾಚಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇಂದು ಅವರು ಮತ್ತೊಮ್ಮೆ ಕ್ಷಮೆ ಯಾಚಿಸಿದ್ದಾರೆ.
“ನನ್ನನ್ನು ಕೊಲ್ಲಲು ಮತ್ತು ನನ್ನ ಕುಟುಂಬಕ್ಕೆ ನೋವುಂಟು ಮಾಡಲು ಬಯಸುವ ಜನರಿಂದ ಜೀವ ಬೆದರಿಕೆಗಳು ಬರುತ್ತಿದೆ. ಜನರು ರೋಗಿಗಳಂತೆ ನಟಿಸುತ್ತಾ ನನ್ನ ತಾಯಿಯ ಕ್ಲಿನಿಕ್ಗೆ ನುಗ್ಗಿದ್ದಾರೆ. ನನಗೆ ಭಯವಾಗುತ್ತಿದೆ ಮತ್ತು ಏನು ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ” ಎಂದು ರಣವೀರ್ ಬರೆದಿದ್ದಾರೆ.