ಗದಗ:- ರೋಣ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಹತ್ತು ಬೈಕ್ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಅರೆಸ್ಟ್ ಮಾಡಿದ್ದಾರೆ.
ಆರೋಪಿ ಸಿರಾಜುಲಹಸನ ಎಂಬಾತ ಬಂಧಿತ ಆರೋಪಿ. ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿದ್ದ. ಆರೋಪಿ ಸಿರಾಜುಲಹಸನ ರೋಣ ಪಟ್ಟಣದ ನಿವಾಸಿ ಆಗಿದ್ದು, ಎಸ್ಪಿ ಬಿಎಸ್ ನೇಮಗೌಡ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ.
ಆರೋಪಿಯಿಂದ 3 ಲಕ್ಷ 45 ಸಾವಿರ ಮೌಲ್ಯದ 10 ಬೈಕ್ ವಶಕ್ಕೆ ಪಡೆಯಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಕಳ್ಳ ಹಿಡಿಯಲು ಯಶಸ್ವಿಯಾದ ಪೊಲೀಸರಿಗೆ ಸಾರ್ವಜನಿಕರು ಮೆಚ್ಚುಗೆ ಸುರಿಸಿದ್ದಾರೆ.