ಹುಬ್ಬಳ್ಳಿ: ಆರ್.ಬಿ. ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ನಗರದ ಉದ್ಯಮಿ ಸುರೇಶ ಜಿಗಳೂರ ಅವರನ್ನು ನಂಬಿಸಿದ ವ್ಯಕ್ತಿ, ಅವರಿಂದ ₹5.47 ಕೋಟಿ ಪಡೆದು ವಂಚಿಸಿದ್ದಾನೆ. ಉದ್ಯಮಿ ಸುರೇಶ ಅವರಿಗೆ ಮಂಗ್ಲೇಶ ಎಂಬುವವರಿಂದ ಪುಣೆಯ ರಿಷಿಕೇಶ ಹಾಗೂ ಯೋಗೇಶ ಬೋಸ್ಲೆ ಎಂಬುವರು ಪರಿಚಯವಾಗಿದ್ದರು.
ಅವರು ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಶೇ 20ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅವರು ₹3.87 ಕೋಟಿ ಹಾಗೂ ₹1.60 ಕೋಟಿ ನಗದು ನೀಡಿ ವಂಚನೆಗೊಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.