ಬಾಲಿವುಡ್ ಹ್ಯಾಂಡ್ ಸಮ್ ಹೀರೋ ರಣಬೀರ್ ಕಪೂರ್ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅನಿಮಲ್ ಸಿನಿಮಾ ಹಿಟ್ ಆದ ಬಳಿಕ ಹಲವು ಸಿನಿಮಾಗಳಲ್ಲಿ ರಣಬೀರ್ ತೊಡಗಿಕೊಂಡಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾದ ನಟಿ ಸ್ಟಾರ್ ನಟಿಯರ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸ್ತ್ರೀಲೋಲ, ಚೀಟರ್ ಎಂಬ ಹಣೆಪಟ್ಟಿ ಇದ್ದು, ಈಗಾಲೂ ಹಾಗೆಯೇ ಬದುಕುತ್ತಿದ್ದೇನೆ ಎಂದಿದ್ದಾರೆ.
ಈ ಹಿಂದೆ ಕತ್ರಿನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡಿದ್ದರ ಕುರಿತು ರಣ್ಬೀರ್ ಕಪೂರ್ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ನಾನು ಈ ಹಿಂದೆ ಇಬ್ಬರು ಯಶಸ್ವಿ ನಟಿಯರೊಂದಿಗೆ ಡೇಟ್ ಮಾಡಿದ್ದೆ. ಅದು ನನ್ನ ಐಡೆಂಟಿಟಿ ಆಗಿ ಹೋಯಿತು. ನನಗೆ ಚೀಟರ್, ಸ್ತ್ರೀಲೋಲ ಎನ್ನುವ ಟ್ಯಾಗ್ ಸಿಕ್ಕಿತು. ನನ್ನ ಜೀವನದ ಬಹುಪಾಲು ನಾನು ಮೋಸಗಾರ ಎಂಬ ಹಣೆಪಟ್ಟಿಯೊಂದಿಗೆ ಬದುಕಿದ್ದೇನೆ ಎಂದಿದ್ದಾರೆ.
ದೀಪಿಕಾ ಪಡುಕೋಣೆ ಜೊತೆ ಡೇಟಿಂಗ್ ಮಾಡುತ್ತಿದ್ದ ರಣಬೀರ್ ಕಪೂರ್ 2010ರಲ್ಲಿ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಬಳಿಕ 6 ವರ್ಷಗಳ ಕಾಲ ಕತ್ರಿನಾ ಕೈಫ್ ಜೊತೆ ಡೇಟಿಂಗ್ ನಂತರ 2016ರಲ್ಲಿ ದೂರ ದೂರವಾದರು. ನಂತರ ಆಲಿಯಾ ಭಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.