ನಿರ್ದೇಶಕ ದುನಿಯಾ ಸೂರಿ (Duniya Suri) ಈ ಹಿಂದೆ ರಕ್ಷಿತ್ ಶೆಟ್ಟಿಗಾಗಿ (Rakshit Shetty) ‘ಕದನ ವಿರಾಮ’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ಆ ನಂತರ ಈ ಸಿನಿಮಾ ಆಗಲೇ ಇಲ್ಲ. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಸೂರಿ ಬ್ಯುಸಿಯಾದರು. ಇದೀಗ ಈ ಸಿನಿಮಾದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.
ಕದನ ವಿರಾಮ ಸಿನಿಮಾವನ್ನು ದರ್ಶನ್ (Darshan) ಗಾಗಿ ಸೂರಿ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ದರ್ಶನ್ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಬರಲಿದೆ ಎಂದೂ ಹೇಳಲಾಗುತ್ತಿತ್ತು. ಈ ಕುರಿತಂತೆ ಸೂರಿ ಸ್ಪಷ್ಟನೆ ಕೊಟ್ಟಿದ್ದಾರೆ. ಕದನ ವಿರಾಮ ಸಿನಿಮಾವನ್ನು ದರ್ಶನ್ ಅವರಿಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ, ದರ್ಶನ್ ಅವರ ಜೊತೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಸೂರಿ ಸಿನಿಮಾ ಮಾಡುವುದಿಲ್ಲ ಎಂಬ ಗಾಸಿಪ್ ಇತ್ತು. ಅದಕ್ಕೂ ಅವರು ತೆರೆ ಎಳೆದಿದ್ದಾರೆ. ಕಥೆ ಯಾರನ್ನು ಕೇಳುತ್ತದೆಯೋ ಅವರಿಗೆ ಸಿನಿಮಾ ಮಾಡುವೆ. ನನ್ನ ಸ್ವಭಾವ ಅದು ಎಂದು ಅವರು ಹೇಳಿಕೊಂಡಿದ್ದಾರೆ.