ಯುವ ಓಪನರ್ ಶುಭಮನ್ ಗಿಲ್, ಟೀಮ್ ಇಂಡಿಯಾದ ಟೆಸ್ಟ್, ಒಡಿಐ ಮತ್ತು ಟಿ20-ಐ ತಂಡಗಳಿಗೆ ಕ್ಯಾಪ್ಟನ್ ಆಗಲ್ಲರು ಎಂದು ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್ ಭವಿಷ್ಯ ನುಡಿದಿದ್ದಾರೆ.
ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿರುವ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್, ಯುವ ಆಟಗಾರನ ಸಾಮರ್ಥ್ಯವನ್ನು ನೆಚ್ಚಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ 2024ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಕೋಚಿಂಗ್ ಬಳಗದ ಅಧಿಕಾರ ಅವಧಿ ಅಂತ್ಯಗೊಂಡಿದೆ. ಬ್ಯಾಟಿಂಗ್ ಕೋಚ್ ಸ್ಥಾನದಲ್ಲಿದ್ದ ವಿಕ್ರಮ್ ರಾಠೋರ್ ಕೂಡ ತಮ್ಮ ಸೇವೆ ಕೊನೆಗೊಳಿಸಿದ್ದಾರೆ.
ತಮ್ಮ ವೃತ್ತಿ ಜೀವನದ ಮೂರು ಅತ್ಯುತ್ತಮ ಕ್ಷಣಗಳನ್ನು ತಿಳಿಸಿದ ರೋಹಿತ್ ಶರ್ಮಾ
ಭಾರತ ತಂಡ ಈಗ ವೈಟ್ಬಾಲ್ ಕ್ರಿಕೆಟ್ ಸರಣಿಗಳ ಸಲುವಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶುಭಮನ್ ಗಿಲ್ ಭಾರತದ ಟಿ20 ಕ್ರಿಕೆಟ್ ತಂಡ ಮತ್ತು ಒಡಿಐ ಕ್ರಿಕೆಟ್ ಎರಡೂ ತಂಡಗಳಲ್ಲಿ ವೈಸ್ ಕ್ಯಾಪ್ಟನ್ ಪಟ್ಟ ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಭಾರತದ ಟಿ20-ಐ ತಂಡದ ನೂತನ ಕ್ಯಾಪ್ಟನ್ ಆದರೆ, ಒಡಿಐ ಮತ್ತು ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾ ಮುಂದುವರಿದಿದ್ದಾರೆ.
ಶುಭಮನ್ ಗಿಲ್ ಅವರ ಬ್ಯಾಟಿಂಗ್ ಮೊದಲ ಬಾರಿ ಕಂಡ ಕೂಡಲೇ ಆಕರ್ಷಿತನಾದೆ. ಆತ ವಿಶೇಷ ಪ್ರತಿಭೆಯ ಬ್ಯಾಟರ್. ಟೀಮ್ ಇಂಡಿಯಾ ಪರ ದೀರ್ಘ ಕಾಲ ಸೇವೆ ಸಲ್ಲಿಸುವ ಸಾಮರ್ಥ್ಯ ಆತನಲ್ಲಿದೆ. ಒತ್ತಡದ ನಡುವೆ ಬ್ಯಾಟ್ ಮಾಡುವ ಸಾಮರ್ಥ್ಯ ಆತನಲ್ಲಿದೆ. ಸವಾಲುಗಳಿಗೆ ದಿಟ್ಟವಾಗಿ ಉತ್ತರ ಕೊಡುವ ಬ್ಯಾಟರ್ ಆತ,” ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿರುವ ಸಂದರ್ಶನದಲ್ಲಿ ರಾಠೋರ್ ಹೇಳಿದ್ದಾರೆ.