ಬೆಂಗಳೂರು: ಚಾಮರಾಜಪೇಟೆಯ ಶಾಸಕರ ಕಚೇರಿಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಳಿಕ ಶೀಘ್ರವೇ ಪರಿಹಾರ ಸೂಚಿಸುವದಾಗಿ ಭರವಸೆ ನೀಡಿದರು. ಜನರು ತಮ್ಮ ಸಮಸ್ಯೆ ಹೇಳಿಕೊಂಡು ಕಣ್ಣೀರು ಹಾಕಿದ್ದು ಇದಕ್ಕೆ ಸ್ಪಂದಿಸಿದ ಜಮೀರ್ ಅಹಮದ್ ಖಾನ್ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ನಿಮ್ಮ ಸಮಸ್ಯೆಗೆ ನಾನು ಸದಾ ಬದ್ಧನಾಗಿರುತ್ತೇನೆ. ಕ್ಷೇತ್ರ ಅಭಿವೃದ್ದಿಯ ಜವಾಬ್ದಾರಿ ನನ್ನದು, ಆತಂಕಪಡದಿರಿ. ನಿಮ್ಮ ಸಹಕಾರ ನಮಗೆ ಅಗತ್ಯವಾಗಿದೆ ಎಂದರು.
