ಬೆಂಗಳೂರು: ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳ ಗೊಂದಲ ನಿವಾರಿಸುವ ಬಗ್ಗೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಡಿಜಿ & ಐಜಿಪಿ ಪ್ರವೀಣ್ ಸೂದ್ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಜಮೀರ್ ಅಹಮದ್ ಖಾನ್, ಶಬ್ದ ಮಾಲಿನ್ಯ & ಸಾರ್ವಜನಿಕರಿಗೆ ತೊಂದರೆ ಆಗದಂತೆ ಧ್ವನಿ ವರ್ಧಕ ಅಳವಡಿಸಿದ್ದೇವೆ.
ಆದರೂ ರಾಜ್ಯದ ಕೆಲ ಪೊಲೀಸ್ ಠಾಣೆಗಳಿಂದ ಮಸೀದಿ ಆಡಳಿತ ಮಂಡಳಿಗೆ ನೋಟಿಸ್ ಕೊಟ್ಟಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಕೊಟ್ಟ ನೋಟಿಸ್ ಅನ್ನು ಪೊಲೀಸ್ ಠಾಣೆ ವಾಪಸ್ ಪಡೆಯಬೇಕು. ಹಾಗೂ ಎಂದಿನಂತೆ ಧ್ವನಿವರ್ಧಕ ಬಳಸಲು ಮನವಿ ಮಾಡಿದ್ದೇನೆ ಎಂದು ಜಮೀರ್ ಮಾಹಿತಿ ನೀಡಿದ್ದಾರೆ.
