ಆನೇಕಲ್:- ಸಹಪಾಠಿಗಳಿಂದಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಹಿನ್ನೆಲೆ ಮೂವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ.
ವೆಂಕಟರೆಡ್ಡಿ(24), ಸೌರವ್(22) ಮತ್ತು ರಿಷವ್(24) ಬಂಧಿತರು. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೆಬ್ರವರಿ 4 ನೇ ತಾರೀಖು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಚ್ಚರ ಜನರೇ: ಬೇಸಿಗೆಯಲ್ಲಿ ಹೀಗೆ ಮಾಡಿದ್ರೆ ಫ್ರಿಡ್ಜ್ ಸ್ಪೋಟವಾಗತ್ತೆ!
ಉತ್ತರ ಭಾರತ ಮೂಲದ ಯುವತಿ ಎಲ್ಎಲ್ ಬಿ ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಪಿಜಿಯಲ್ಲಿ ವಾಸ ಮಾಡುತ್ತಿದ್ದರು 4ನೇ ತಾರೀಖು ಊಟಕ್ಕೆ ಪಿಜಿಗೆ ತೆರಳುತ್ತಿದ್ದರು.
ಸಹಪಾಠಿ ಸೌರವ್ ಭೇಟಿಯಾಗಿ ಬೈಕ್ ನಲ್ಲಿ ಡ್ರಾಪ್ ಕೂಡ ಮಾಡಿಸಿಕೊಂಡಿದ್ದಳು. ಡ್ರಾಪ್ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಯುವತಿಗೆ ತಲೆಗೆ ಗಾಯವಾಗಿದೆ. ಪ್ರಜ್ಞೆ ತಪ್ಪಿದ್ದ ಯುವತಿಗೆ ಹತ್ತಿರದ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಬೆಳಗ್ಗೆ ಎಚ್ಚರಗೊಂಡಾಗ ಸಹಪಾಠಿ ಸೌರವ್ ಮನೆಯಲ್ಲಿ ಯುವತಿ ಇದ್ದಳು. ಅಲ್ಲಿಗೆ ಬಂದ ಸಹಪಾಠಿಗಳಾದ ವೆಂಕಟ ರೆಡ್ಡಿ ಮತ್ತು ರಿಷವ್ ನಿಂದ ಕೃತ್ಯ ನಡೆದಿದೆ. ಎಣ್ಣೆಪಾರ್ಟಿ ಶುರುವಾಗುತ್ತಿದ್ದಂತೆ ಯುವತಿ ಹೊರ ಹೋಗಲು ಯತ್ನಿಸಿದ್ದಾರೆ. ತಡೆದು ನೆಲದ ಮೇಲೆ ವೆಂಕಟ್ ರೆಡ್ಡಿ ತಳ್ಳಿದ್ದಾನೆ.ಮೈ ಕೈ ಮುಟ್ಟಿ ಅಸಭ್ಯವಾಗಿ ಯುವತಿ ಜೊತೆ ವರ್ತನೆ ಮಾಡಿದ್ದಾರೆ.
ಈ ಬಗ್ಗೆ ಹೆಬ್ಬಗೋಡಿ ಠಾಣೆಗೆ ಯುವತಿ ದೂರು ನೀಡಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.